ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಪ್ರದೇಶದಲ್ಲಿ ಕೊರೊನಾ ಕಟ್ಟೆಚ್ಚರ ವಹಿಸಲಾಗಿದ್ದು,ಕಳ್ಳಬೇಟೆ ಶಿಬಿರದಲ್ಲಿನ ಸಿಬ್ಬಂದಿ ಅರಣ್ಯ ಬಿಟ್ಟುಹೊರಬರದಂತೆ ಅರಣ್ಯ ಇಲಾಖೆ ನಿಗಾವಹಿಸಿದೆ.
ವನ್ಯ ಜೀವಿಗಳಿಗೆ ಕೊರೊನಾ ಸೋಂಕು ಭೀತಿ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 52ಕ್ಕೂಹೆಚ್ಚು ಕಳ್ಳ ಬೇಟೆ ತಡೆ ಶಿಬಿರಗಳಿದ್ದು, ಒಂದು ಕ್ಯಾಂಪ್‌ನಲ್ಲಿ 5 ಜನ ಇರಲಿದ್ದಾರೆ. ಕ್ಯಾಂಪ್‌ನ ಸಿಬ್ಬಂದಿ ಊರಿಗೆಹೋಗಂಗಿಲ್ಲ, ರಜೆ ಮೇಲೆ ತೆರಳಿದ ಸಿಬ್ಬಂದಿಯೂಊರಿಂದ ಕ್ಯಾಂಪಿಗೆ ಬರುವಂತಿಲ್ಲ, ಹಳ್ಳಿಗಳಲ್ಲೂಕೊರೊನಾ ವ್ಯಾಪಿಸಿರುವುದರಿಂದ ಅರಣ್ಯ ಇಲಾಖೆಈ ಕ್ರಮ ಕೈಗೊಂಡಿದೆ.
ಮನುಷ್ಯರ ಬಳಿಕ ವನ್ಯಜೀವಿಗಳಿಗೂ ಸೋಂಕು ಭೀತಿ ಎದುರಾಗಿರುವುದರಿಂದ ಈನಿರ್ಧಾರಕ್ಕೆ ಬರಲಾಗಿದೆ ಎಂದು ಎಸಿಎಫ್ ಪರಮೇಶ್‌ತಿಳಿಸಿದರು.ಕೊರೊನಾ ಹೆಚ್ಚಳ ಹಿನ್ನೆಲೆ ಬಂಡೀಪುರ ಸಫಾರಿಹಾಗೂ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನಕ್ಕೆನಿರ್ಬಂಧ ಹೇರಲಾಗಿದ್ದು ಅರಣ್ಯ ಪ್ರದೇಶಕ್ಕೆ ಜನಸಂಪರ್ಕ ತೀರಾ ಕಡಿಮೆ. ಕಳ್ಳ ಬೇಟೆ ಶಿಬಿರಗಳಲ್ಲಿರುವವರು ಊರಿಗೆ ತೆರಳಿ ಅಲ್ಲಿಂದ ವೈರಸ್ ತಂದರೆ ಕಷ್ಟಎಂದು ರಜೆ ಕಟ್ ಮಾಡಲಾಗುತ್ತಿದೆ.
ಅರಣ್ಯ ಇಲಾಖೆ ನೌಕರರು, ಸಿಬ್ಬಂದಿ ಲಸಿಕೆಪಡೆದಿದ್ದಾರೆ. ಸೋಂಕು ತಗುಲಿದವರ ಸಂಖ್ಯೆಯೂಕಡಿಮೆ. ಈ ಮಧ್ಯೆ ವಾರಕ್ಕೊಮ್ಮೆ ಸಿಬ್ಬಂದಿಗೆ ಕೋವಿಡ್‌ಪರೀಕ್ಷೆಯನ್ನೂ ಕಡ್ಡಾಯಗೊಳಿಸಲಾಗಿದೆ.ಹಸಿರು ತುಂಬಿದ ಬಂಡೀಪುರ: ಬಂಡೀಪುರವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದಿದ್ದು ಇಡೀ ಕಾಡುಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿದ್ದು ಪ್ರಾಣಿಗಳಿಗೆ ನೀರಿನ ದಾಹನೀಗಿದಂತಾಗಿದೆ.
ಬಸವರಾಜು ಎಸ್.ಹಂಗಳ