Advertisement

ಕೊರೊನಾ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ

06:26 PM May 12, 2021 | Team Udayavani |

ಚಿಕ್ಕನಾಯಕನಹಳ್ಳಿ: ಕೋವಿಡ್‌ ನಿಯಮಉಲ್ಲಂಘನೆ ಮಾಡುವವರ ಮೇಲೆನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಯಾವುದೇಮುಲಾಜಿಗೆ ಒಳಗಾಗಬೇಡಿ. ಅನಗತ್ಯ ವಾಹನಸಂಚಾರಕ್ಕೆ ಕಡಿವಾಣ ಹಾಕಿ ಎಂದು ಸಚಿವ ಜೆ.ಸಿಮಾಧುಸ್ವಾಮಿ ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆಸೂಚನೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣದ ಬಗ್ಗೆಹಾಗೂ ಸೋಂಕಿತರಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿಮಾತನಾಡಿದ ಅವರು, ಕೋವಿಡ್‌ ಸೋಂಕಿತರಿಗೆಅಗತ್ಯವಿರುವ ಆಕ್ಸಿಜನ್‌, ಔಷಧ ಹಾಗೂ ಲಸಿಕೆಗಳನ್ನುದಾಸ್ತಾನು ಮಾಡಿಟ್ಟುಕೊಳ್ಳಿ. ಯಾವುದೇಪ್ರಾಣಾಪಾಯ ಆಗದಂತೆ ಮುಂಜಾಗ್ರತೆ ವಹಿಸಿ,ಕೋವಿಡ್‌ ಸೆಂಟರ್‌ಗಳನ್ನು ಸ್ವತ್ಛವಾಗಿಟ್ಟುಕೊಳ್ಳುವಂತೆಕ್ರಮಕೈಗೊಳ್ಳಬೇಕು ಎಂದರು.

ಪಲ್ಸ್‌ ಆಕ್ಸಿಮೀಟರ್‌ ಒದಗಿಸಿ: ಲಸಿಕೆಅಭಿಯಾನದ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ 18ರಿಂದ 45 ವರ್ಷ ಒಳಗೆ ಇರುವವರ ಹೆಸರನ್ನುದಾಖಲಿಸಲು ಪಿಡಿಒಗಳಿಗೆ ಸೂಚಿಸಿದರು.ಪಾಸಿಟಿವ್‌ ಬಂದ ವ್ಯಕ್ತಿಯನ್ನು ಕೋವಿಡ್‌ ಸೆಂಟರ್‌ಗೆದಾಖಲಿಸುವಾಗ ಅನಗತ್ಯವಾಗಿ ತೊಂದರೆ ನೀಡಿದರೆಅವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು.

ಶೇ 90ಕ್ಕೂ ಕಡಿಮೆ ಉಸಿರಾಟವಿರುವ ವ್ಯಕ್ತಿಯನ್ನುಮಾತ್ರ ಆಸ್ಪತ್ರೆಗೆ ದಾಖಲಿಸಿ ಕೊಳ್ಳಬೇಕು. ಪಲ್ಸ್‌ಆಕ್ಸಿಮೀಟರ್‌ಗಳನ್ನು ಆಶಾ ಕಾರ್ಯಕರ್ತೆಯರಿಗೆಒದಗಿಸಬೇಕು. ಪಟ್ಟಣದ ಸ್ಮಶಾನದಲ್ಲಿ ಮೃತ ದೇಹಸುಡುವ ಒಲೆಗಳನ್ನು ಅಳವಡಿಸುವಂತೆ ಪುರಸಭೆಮುಖ್ಯಾಧಿಕಾರಿಗೆ ಸೂಚನೆ ನೀಡಿದರು.ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡೆ R,ಡಿಎಚ್‌ಒ ನಾಗೇಂದ್ರಪ್ಪ, ಡಿವೈಎಸ್‌ಪಿ ಚಂದನ್‌,ತಹಶೀಲ್ದಾರ್‌ ತೇಜಸ್ವಿನಿ, ಟಿಎಚ್‌ಒ ಡಾ.ನವೀನ್‌,ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳುಹಾಗೂ ಇತರರು ಇದ ªರು.

Advertisement

Udayavani is now on Telegram. Click here to join our channel and stay updated with the latest news.

Next