Advertisement

ಖರೀದಿ ಮಾಡಿದ ರಾಗಿ ಹಣ ಇನ್ನೂ ರೈತರ ಕೈ ಸೇರಿಲ್ಲ!

08:21 PM May 07, 2021 | Team Udayavani |

ಚಿಕ್ಕನಾಯಕನಹಳ್ಳಿ: ಮುಂಗಾರು ಆರಂಭವಾದರುಹಿಂಗಾರಿನಲ್ಲಿ ಬೆಳೆದ ರಾಗಿಯ ಹಣ ಇನ್ನೂಬಹುತೇಕ ರೈತರ ಕೈಗೆ ಸೇರಿಲ್ಲ. ಕೋವಿಡ್‌ ಲಾಕ್‌ಡೌನ್‌ನಿಂದ ಪರಿತಪಿಸುತ್ತಿರುವ ರೈತರುಮುಂಗಾರು ಬೆಳೆ ಬೆಳೆಯಲು ಸಾಲ ಮಾಡುವಂತಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬೆಂಬಲಬೆಲೆ ನೀಡಿ ರೈತರಿಂದ ಖರೀದಿ ಮಾಡಿದ ರಾಗಿಯಹಣ ಇನ್ನೂ ರೈತರಿಗೆ ನೀಡದಿರುವುದು ಕುಟುಂಬ ನಿರ್ವಹಣೆ ಕಷ್ಟವಾಗಿದೆ.ಲಾಕ್‌ಡೌನ್‌ನಿಂದ ಕೂಲಿ ಕೆಲಸವಿಲ್ಲದೆಕಂಗಾಲಾಗಿರುವ ರೈತರ ಜೀವನ ಕಷ್ಟ ಸ್ಟ ಾಧ್ಯವಾಗಿದೆ.

Advertisement

ತಾಲೂಕಿನಲ್ಲೇ ಬಹುತೇಕ ಭಾಗದಲ್ಲಿ ಮುಂಗಾರುಮಳೆ ತೃಪ್ತಿದಾಯಕವಾಗಿದ್ದು, ಕೃಷಿ ಚಟುವಟಿಕೆಆರಂಭಗೊಂಡಿವೆ. ಬೇಸಾಯ ಮಾಡಿಸಲು,ಗೊಬ್ಬರ, ಬೀಜ ತರಲು ರೈತರಿಗೆ ಹಣದ ಅವ್ಯಕತೆಇದೆ. ಆದರೆ, ರೈತರು ಹಿಂಗಾರು ಬೆಳೆ ರಾಗಿಮಾರಾಟವಾದ ಹಣ ಸರ್ಕಾರ ಇನ್ನೂ ರೈತರಿಗೆನೀಡದಿರುವುದು ರೈತರಿಗೆ ನುಂಗಲಾಗದ ತುತ್ತಾಗಿದೆ.

ಹಣ ಬಂದಿಲ್ಲ: ಸರ್ಕಾರ ರೈತರಿಗೆ ಬೆಂಬಲ ಬೆಲೆನೀಡಿ ರಾಗಿ ಖರೀದಿ ಮಾಡಿದೆ. ಸರ್ಕಾರ ಹೆಚ್ಚು ಬೆಲೆನೀಡುತ್ತದೆ ಎಂಬ ಆಸೆಯಿಂದ ರೈತರು ರಾತ್ರಿ,ಹಗಲು ಎನ್ನದೆ ಕಾಯ್ದು ಕುಳಿತು ರಾಗಿ ಖರೀದಿಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ್ದರು. ಲಕ್ಷಾಂತರರೂ.ರಾಗಿ ಮಾರಾಟ ಮಾಡಿದ ರೈತರಿಗೆ ನಯಾಪೈಸೆಹಣ ಕೈಸೇರಿಲ್ಲ. ಹಣದ ಚೀಟಿ ಹಿಡಿದುಕೊಂಡುಹಣದ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ತಾಲೂಕಿನಲ್ಲಿ ಕೆಲ ರೈತರಿಗೆ ಹಣ ಜಮೆಯಾಗಿದ್ದು,ಇನ್ನೂ ಬಹುತೇಕ ರೈತರಿಗೆ ರಾಗಿ ಮಾರಾಟ ಮಾಡಿಎರಡು ತಿಂಗಳು ಕಳೆದರೂ ಸರ್ಕಾರದಿಂದ ಹಣಬಂದಿಲ್ಲ.

ಲಾಕ್‌ಡೌನ್‌ನಲ್ಲಿ ಹಣದ ಅವಶ್ಯಕತೆ: ಕೋವಿಡ್‌ನಿರ್ಬಂಧದಿಂದ ಸಣ್ಣ ರೈತರು ಕೆಲಸವಿಲ್ಲದೆಪರದಾಡುತ್ತಿದ್ದು. ಊಟಕ್ಕೂ ತೊಂದರೆಯಾದಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಾಲ ಮಾಡಿ ಬೆಳೆದರಾಗಿಯನ್ನು ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆಮಾರಾಟ ಮಾಡಿದ್ದು, ಹೆಚ್ಚಿನ ಬೆಲೆ ಸಿಗುವ ಆಸೆಗೆಮಾರಾಟ ಮಾಡಿ ಇನ್ನೂ ಹಣಬರದೆ ಇರುವುದುಲಾಕ್‌ಡೌನ್‌ ಸಂದರ್ಭದಲ್ಲಿ ತೀರ್ವತೊಂದರೆಯಾಗಿದೆ. ಸರ್ಕಾರ ಕೂಡಲೇ ರಾಗಿಖರೀದಿ ಕೇಂದ್ರದಿಂದ ಖರೀದಿ ಮಾಡಿ ರಾಗಿಹಣವನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಕಷ್ಟಅನುಭವಿಸುತ್ತಿರುವ ರೈತರಿಗೆ ಕೂಡಲೇ ನೀಡಬೇಕುಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next