Advertisement

ವೈದ್ಯ ವಿದ್ಯಾರ್ಥಿಗಳಿಗೆ ಬಾರದ ಗೌರವಧನ

01:44 PM May 06, 2021 | Team Udayavani |

ಬೆಂಗಳೂರು : ಕೊರೊನಾ ಸೋಂಕಿಯರ ಆರೈಕೆಹಾಗೂ ಚಿಕಿತ್ಸೆಗಾಗಿ ರಚಿಸಿರುವ ಆರೈಕೆ ಕೇಂದ್ರಗಳಲ್ಲಿಶುಶ್ರೂಷಕರಾಗಿ ಸೇವೆ ಸಲ್ಲಿಸಿರುವ ನರ್ಸಿಂಗ್‌ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸರಿಯಾಗಿ ಗೌರವಧನೀಡದೇ ಇರುವುದರಿಂದ ಈಗ ಶುಶ್ರೂಷಕರ ಕೊರತೆ ಎದುರಿಸುತ್ತಿದೆ.

Advertisement

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಶುಶ್ರೂಷಕರಾಗಿ ಸೇವೆಸಲ್ಲಿಸಿದ ವಿದ್ಯಾರ್ಥಿಗಳಿಗೆ ಪಾಳಿ ಪದ್ಧತಿಯ ಆಧಾರದಲ್ಲಿತಿಂಗಳಿಗೆ ಗೌರವಧನ ನೀಡುವುದಾಗಿ ಬಿಬಿಎಂಪಿಹೇಳಿತ್ತು. ಅದರಂತೆ ಸ್ಪಷ್ಟ ಹಣವನ್ನು ವಿದ್ಯಾರ್ಥಿಗಳಬ್ಯಾಂಕ್‌ ಖಾತೆಗೆ ಬಿಡುಗಡೆಯನ್ನು ಮಾಡಿದೆ. ಆದರೆ,ಕಳೆದ ವರ್ಷದಲ್ಲಿ ಕೊರೊನಾ ಕೇರ್‌ ಕೇಂದ್ರದಲ್ಲಿ ಸೇವೆಮಾಡಿರುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಗೌರವಧನನೀಡದೇ ಇರುವುದರಿಂದ ಈಗ ಶುಶ್ರೂಷಕರಾಗಿ ಸೇವೆಸಲ್ಲಿಸಲು ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲ ಎಂದುಮೂಲಗಳು ತಿಳಿಸಿವೆ.

ಕಳೆದ ವರ್ಷ ಕೊರೊನಾ ಕಾಣಿಸಿಕೊಂಡಸಂದರ್ಭದಲ್ಲಿ ಬಿಬಿಎಂಪಿ ಹಾಗೂ ಸರ್ಕಾರದಿಂದನಗರದಾದ್ಯಂತ ಹಲವು ಆರೈಕೆ ಕೇಂದ್ರಗಳನ್ನುತೆರೆಯಲಾಗಿತ್ತು. ಅಲ್ಲಿಗೆ ಸೋಂಕಿತರ ಆರೈಕೆಗಾಗಿನರ್ಸಿಂಗ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವಿದ್ಯಾರ್ಥಿಗಳನ್ನು ರಾಜ್ಯ ಶುಶ್ರೂಷ ಪರಿಷತ್‌ ಮೂಲಕಆರೈಕೆ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ನಗರದ ಬೇರೆಬೇರೆ ನರ್ಸಿಂಗ್‌ ಕಾಲೇಜುಗಳ ಸುಮಾರು 800ಕ್ಕೂಅಧಿಕ ವಿದ್ಯಾರ್ಥಿಗಳನ್ನು ಪಾಳಿ ಪದ್ಧತಿ ಆಧಾರದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಈ ವಿದ್ಯಾರ್ಥಿಗಳುಬೇಡಿಕೆಯ ಆಧಾರದಲ್ಲಿ ಐದಾರು ತಿಂಗಳಿಗೂ ಅಧಿಕಕಾಲ ಸೇವೆ ಸಲ್ಲಿಸಿದ್ದಾರೆ.

ಆದರೆ, ಬಿಬಿಎಂಪಿಯಿಂದಸರಿಯಾದ ಪ್ರಮಾಣದಲ್ಲಿ ಗೌರವಧನ ನೀಡಿಲ್ಲ.ಹೀಗಾಗಿ ಈಗ ಸೇವೆಗೆ ಬರಲು ವಿದ್ಯಾರ್ಥಿಗಳುಹಿಂದೇಟು ಹಾಕುತ್ತಿದ್ದಾರೆ ಎಂದು ಪರಿಷತ್‌ನ ಹಿರಿಯಅಧಿಕಾರಿಗಳು ಮಾಹಿತಿ ನೀಡಿದರು.

ಶುಶ್ರೂಷಕರ ಕೊರತೆ: ನಗರದ ಕೊರೊನಾ ಆರೈಕೆಕೇಂದ್ರದಲ್ಲಿ ಈಗ ಶುಶ್ರೂಷಕರ ಕೊರತೆ ಹೆಚ್ಚಿದೆ.ನಿತ್ಯವೂ 200ರಿಂದ 250ಮಂದಿ ಶುಶ್ರೂಷಕರನ್ನುನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

Advertisement

ಆದರೆ, 25ರಿಂದ 50ಶುಶ್ರೂಷಕರನ್ನು ನಿಯೋಜಿಸುವುದು ಕಷ್ಟವಾಗುತ್ತಿದೆ.ನರ್ಸಿಂಗ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನೇ ನಿಯೋಜಿಸಬೇಕಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಈಗ ಮನೆಗೆ ಹೋಗಿದ್ದಾರೆ.ಅಲ್ಲದೆ, ಕೆಲವೊಂದು ಕಡೆಗಳಲ್ಲಿ ಹಾಸ್ಟೆಲ್‌ನಲ್ಲಿ ಉಳಿಯಲು ಅನುಮತಿ ನೀಡದೇ ಇರುವುದರಿಂದ ಶುಶ್ರೂಷಕರನ್ನು ನಿಯೋಜನೆ ಮಾಡುವುದೇಕಷ್ಟವಾಗುತ್ತಿದೆ ಎಂದು ಪರಿಷತ್‌ನ ಪ್ರಭಾರ ರಿಜಿಸ್ಟ್ರಾರ್‌ ಉಷಾಭಂಡಾರಿ ವಿವರ ನೀಡಿದರು.

ಶುಶ್ರೂಷಕರನ್ನುನಿಯೋಜಿಸುವಂತೆ ನಿತ್ಯವೂ ಬೇಡಿಕೆ ಬರುತ್ತಿದೆ. ಖಾಸಗಿ ನರ್ಸಿಂಗ್‌ಕಾಲೇಜುಗಳಿಂದಲೂ ವಿದ್ಯಾರ್ಥಿಗಳನ್ನು ನಿಯೋಜನೆಮಾಡುತ್ತಿದ್ದೇವೆ. ಕೋವಿಡ್‌ ಕೇರ್‌ಕೇಂದ್ರದಲ್ಲಿ ಶುಶ್ರೂಷಕರಾಗಿ ಸೇವೆಸಲ್ಲಿಸಿದ ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ಸರಿಯಾಗಿಗೌರವಧನ ಬಂದಿಲ್ಲ. ಅಲ್ಲದೆ,ಬಹುತೇಕ ವಿದ್ಯಾರ್ಥಿಗಳು ಈಊರಿಗೆ ಹೋಗಿರುವುದರಿಂದಶುಶ್ರೂಷಕರ ಕೊರತೆ ನಿಗಿಸಲುಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ.

  • ಉಷಾ ಭಂಡಾರಿ, ಪ್ರಭಾರ ರಿಜಿಸ್ಟ್ರಾರ್‌,ರಾಜ್ಯ ಶುಶ್ರೂಷಕರ ಪರಿಷತ್‌
Advertisement

Udayavani is now on Telegram. Click here to join our channel and stay updated with the latest news.

Next