ಧಾರವಾಡ: ಮದುವೆ ಸಮಾರಂಭದಲ್ಲಿಪಾಲ್ಗೊಳ್ಳುವವರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಕೈಬ್ಯಾಂಡ್ ಪರಿಚಯಿಸಿರುವ ಜಿಲ್ಲಾಡಳಿತವು ಈಗಾಗಲೇನಿಗದಿ ಆಗಿರುವ ಮದುವೆಗಳಿಗೆ ಮಾಂಗಲ್ಯ ಖರೀದಿಗೆಅವಕಾಶವನ್ನೂ ನೀಡಿದೆ.
ಮದುವೆ ನಿಶ್ಚಯ ಮಾಡಿರುವ ಅನೇಕರುಮದುವೆಗೆ ಸ್ವಲ್ಪ ದಿನ ಮುಂಚಿತವಾಗಿ ಮಾಂಗಲ್ಯಖರೀದಿಸಲು ನಿರ್ಧರಿಸಿ ಸುಮ್ಮನಿದ್ದರು. ಆದರೆಅನಿರೀಕ್ಷಿತವಾಗಿ ಬಂದ ಸೆಮಿಲಾಕ್‌ಡೌನ್ ಅವರನ್ನುತೊಂದರೆಗೀಡು ಮಾಡಿದೆ. ಅನೇಕರು ಜಿಲ್ಲಾಡಳಿತಕ್ಕೆಮನವಿ ಮಾಡಿ, ಆರ್ಡರ್ ಕೊಟ್ಟಿರುವ, ಬುಕ್‌ಮಾಡಿರುವ ಮಾಂಗಲ್ಯ ಪಡೆಯಲು ಹಾಗೂಮೊದಲೇ ನಿರ್ಧರಿಸಿರುವ ಚಿನ್ನದ ಅಂಗಡಿಯಲ್ಲಿಮಾಂಗಲ್ಯ ಖರೀದಿ ಮಾಡಲು ಅವಕಾಶ ನೀಡುವಂತೆಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂ ಧಿಸಿರುವ ಡಿಸಿ ನಿತೇಶಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಮ್‌ಅವರೊಂದಿಗೆ ಚರ್ಚಿಸಿ, ಕೆಲವು ಷರತ್ತುಗಳೊಂದಿಗೆಮಾಂಗಲ್ಯ ಖರೀದಿಗೆ ಅನುಮತಿ ನೀಡಲುನಿರ್ಧರಿಸಿದ್ದಾರೆ. ಅದಕ್ಕಾಗಿ ಷರತ್ತುಗಳನ್ನು ರೂಪಿಸಿಆಯೋಜಕರು ಪಾಲಿಸಲು ಸೂಚಿಸಿದ್ದಾರೆ.
ಮೇ 4ರ ವರೆಗೆ ಜರುಗುವ ಮದುವೆಗಳಿಗಾಗಿಜಿಲ್ಲಾಡಳಿತದಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳ್ಳಿಸಲಾಗಿದ್ದು, ಜಿಲ್ಲಾಡಳಿತದ ಪರವಾಗಿಪಾಲಿಕೆ ವ್ಯಾಪ್ತಿಯಲ್ಲಿ ವಲಯ ಸಹಾಯಕ ಆಯುಕ್ತರುಹಾಗೂ ಉಳಿದ ಕಡೆಗೆ ತಹಶೀಲ್ದಾರರು ಅನುಮತಿ ಪತ್ರನೀಡುತ್ತಾರೆ. ಆಯೋಜಕರು ಮದುವೆಗೆ ಅನುಮತಿಪಡೆಯಲು ಬಂದಾಗ ಅಗತ್ಯವಿದ್ದರೆ ಮಾಂಗಲ್ಯಖರೀದಿಗೆ ಅನುಮತಿ ಕೇಳಿ ಮನವಿ ಸಲ್ಲಿಸಬಹುದು.
ಮನವಿಯಲ್ಲಿ ಜ್ಯುವೆಲ್ಲರಿ ಶಾಪ್, ಸ್ಥಳ, ಖರೀದಿಗೆನಿಗದಿತ ಸಮಯ ತಿಳಿಸಬೇಕು. ತಹಶೀಲ್ದಾರ್‌ಅಥವಾ ವಲಯ ಸಹಾಯಕ ಆಯುಕ್ತರು ಮನವಿಪರಿಗಣಿಸಿ ಸಮಯ ಮತ್ತು ಸಿಬ್ಬಂದಿ ಲಭ್ಯತೆಗೆಅನುಗುಣವಾಗಿ ಅನುಮತಿ ನೀಡುತ್ತಾರೆ. ಮಾಂಗಲ್ಯಖರೀದಿ ಮಾಡುವ ಜ್ಯುವೆಲ್ಲರಿ ಶಾಪ್ ವ್ಯಾಪ್ತಿಯಕಂದಾಯ ಅಥವಾ ಪಾಲಿಕೆ ಓರ್ವ ಅ ಧಿಕಾರಿ, ಓರ್ವಪೊಲೀಸ್ ಸಿಬ್ಬಂದಿ ಇರುವ ತಂಡದೊಂದಿಗೆ ಹೋಗಿಮದುವೆ ಮನೆಯ ಒಬ್ಬರು ಮಾತ್ರ ಮಾಂಗಲ್ಯಖರೀದಿಸಬಹುದು. ಖರೀದಿ ಸಂದರ್ಭದಲ್ಲಿ ಪರಸ್ಪರಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆಕಡ್ಡಾಯವಾಗಿದ್ದು, ಸ್ಥಳದಲ್ಲಿ ಜ್ಯುವೆಲ್ಲರಿ ಶಾಪ್‌ದವರುಸ್ಯಾನಿಟೈಜರ್ ಇಟ್ಟಿರಬೇಕು ಎಂದು ಡಿಸಿ ನಿತೇಶಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.