Advertisement

ದುಡಿಯುವ ವರ್ಗಕ್ಕೆ ಮತ್ತೆ ಆತಂಕ

03:41 PM May 09, 2021 | Team Udayavani |

ಬೆಂಗಳೂರು: ಕೊರೊನಾ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ ಮತ್ತೆ ಲಾಕ್‌ಡೌನ್‌ ಜಾರಿಗೊಳಿ ಸಿದೆ. ಇದರಿಂದಾಗಿ ರಾಜ್ಯದಲ್ಲಿ ದುಡಿಯುವ ವರ್ಗ ಮತ್ತೆ ಆತಂಕಕ್ಕೆ ಒಳಗಾಗಿದೆ. ಕಳೆದ ವರ್ಷರಾಜ್ಯಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಸುದೀರ್ಘ‌ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ರೈತರು, ಕಾರ್ಮಿಕರು ಸೇರಿದಂತೆ ವೃತ್ತಿ ನಿರತ ಸಮುದಾಯಗಳು ದುಡಿಯಲು ಕೆಲಸವಿಲ್ಲದೇ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿತ್ತು.

Advertisement

ದಿನದ ಆದಾಯವನ್ನೇ ನೆಚ್ಚಿಕೊಂಡು ಬದುಕುವ ಆಟೋ, ಟ್ಯಾಕ್ಸಿ ಚಾಲಕರು, ದಿನಗೂಲಿ ಕಾರ್ಮಿಕರು,ಕಟ್ಟಡ ಕಾರ್ಮಿಕರು, ಹೂ ಮಾರುವವರು,ಸಾಂಪ್ರದಾಯಿಕ ವೃತ್ತಿಗಳನ್ನೇ ನಂಬಿ ಜೀವನಸಾಗಿಸುತ್ತಿರುವ ನೇಕಾರರು, ಕೌÒರಿಕರು, ಮಡಿವಾಳರು ಸೇರಿದಂತೆ ಅನೇಕ ಸಮುದಾಯಗಳಿಗೆ 2,272ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಿತ್ತು.

ಆದರೆ, ಸರ್ಕಾರ ಘೋಷಣೆ ಮಾಡಿದ ಪರಿಹಾರಪಡೆಯಲು ಆ ಸಮುದಾಯಗಳು ಹರ ಸಾಹಸಪಡಬೇಕಾಯಿತು. ಪರಿಹಾರ ಪಡೆಯಲು ಸರ್ಕಾರ ನಿಗದಿಪಡಿಸಿದ ಮಾನದಂಡದಿಂದಾಗಿ ಅನೇಕರು ಪರಿ ಹಾರ ಪಡೆಯುವಲ್ಲಿ ವಂಚಿತರಾಗುವಂತಾಯಿತು.

ಎರಡನೇ ಲಾಕ್‌ಡೌನ್‌ ಆತಂಕ: ರಾಜ್ಯದಲ್ಲಿ ಕಳೆದ ಬಾರಿಗಿಂತ ವೇಗವಾಗಿ ಕೊರೊನಾ ಎರಡನೇ ಅಲೆಹರಡುತ್ತಿದೆ.

ಕೊರೊನಾ ಅಬ್ಬರಕ್ಕೆ ಅಂಕುಶ ಹಾಕಲುರಾಜ್ಯ ಸರ್ಕಾರ ಮೊದಲ ಪ್ರಯತ್ನವಾಗಿ ನೈಟ್‌ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ನಂತರ ಜನತಾ ಕಪ್ಯೂì ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಿತ್ತು. ಜನತಾ ಕರ್ಫ್ಯೂ ನಿಂದ ಕೊರೊನಾನಿಯಂತ್ರಣಕ್ಕೆ ಬಾರದಿರುವುದರಿಂದ ರಾಜ್ಯ ಸರ್ಕಾರಮತ್ತೆ ಲಾಕ್‌ಡೌನ್‌ ಘೋಷಣೆ ಮಾಡಿದೆ.ದುಡಿಯುವ ವರ್ಗಗಳಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಯೂ ಕೇಳಿ ಬರುತ್ತಿದೆ.

Advertisement

ವಿಶೇಷ ಪ್ಯಾಕೇಜ್‌ ಯಾರಿಗೆಷ್ಟು ತಲುಪಿದೆ ?

ಆಟೋ, ಕ್ಯಾಬ್‌ ಚಾಲಕರಿಗೆ

ಉದ್ದೇಶಿತ ಆಟೋ, ಟ್ಯಾಕ್ಸಿ ಚಾಲಕರ ಸಂಖ್ಯೆ- 7.75 ಲಕ್ಷ ಪರಿಹಾರ ಮೊತ್ತ- 5,000 ರೂ. ಪರಿಹಾರ ಪಡೆದದವರು – 2,15,669 ಪಾವತಿಸಿದ ಮೊತ್ತ- 107.83 ಕೋಟಿ ರೂ.

ಬಾಕಿ ಉಳಿದಿರುವುದು- 1.31 ಕೋಟಿ ರೂ.

ಜೋಳ ಬೆಳೆಗಾರರು ಘೋಷಣೆ- 5000 ರೂ. ಪರಿಹಾರ ಪಡೆಯುವ ರೈತರ ಸಂಖ್ಯೆ- 10 ಲಕ್ಷ ಒಟ್ಟು ಪರಿಹಾರ ಮೊತ್ತ- 500 ಕೋಟಿ ಪರಿಹಾರ ಪಡೆದ ಫ‌ಲಾನುಭವಿಗಳು- 8,00,099 ಪಾವತಿಸಿದ ಮೊತ್ತ -388.71 ಕೋಟಿ

ಹಣ್ಣು, ತರಕಾರಿ, ಹೂ ಬೆಳೆಗಾರರು

ಪರಿಹಾರ ಘೋಷಣೆ- 15,000 ರೂ. ಪ್ರತಿ ಹೆಕ್ಟೇರ್‌ಗೆ ಪರಿಹಾರ ಪಡೆದ ಫ‌ಲಾನುಭವಿಗಳು- 1,39,295 ಪಾವತಿಸಿದ ಮೊತ್ತ- 110.12 ಕೋಟಿ

ಕಾರ್ಮಿಕರಿಗೆ ನೀಡಿದ ಆಹಾರ ಕಿಟ್

ಸಿದ್ಧಪಡಿಸಿದ ಆಹಾರ ಕಿಟ್- 89,86,533 ಆಹಾರದ ಪ್ಯಾಕೆಟ್- 6,08,000 ಆಹಾರ ಕಿಟ್‌ಗೆ ಖರ್ಚು- 25.73 ಕೋಟಿ ರೂ. ಆಹಾರ ಸಾಮಾಗ್ರಿಗಳ ಕಿಟ್‌ ಖರ್ಚು- 46.12 ಕೋಟಿ ರೂ.

ಕ್ಷೌರಿಕ/ಮಡಿವಾಳರು ಪರಿಹಾರ ಘೋಷಣೆ

– 5,000 ರೂ. ಬಂದಿರುವ ಅರ್ಜಿ- 1,41,602 ಪರಿಹಾರ ಪಡೆದವರು – 1,19,642 ಪಾವತಿಸಿದ ಮೊತ್ತ – 59.82 ಕೋಟಿ

ಕಟ್ಟಡ ಕಾರ್ಮಿಕರು

ಪರಿಹಾರ ಘೋಷಣೆ- 5,000 ರೂ. ಪರಿಹಾರ ಪಡೆದವರು – 16,48,431 ಪಾವತಿಸಿದ ಮೊತ್ತ- 824.21 ಕೋಟಿ ರೂ. ಬಾಕಿ ಉಳಿದ ಅರ್ಜಿ- 1,02,034

ವಿದ್ಯುತ್‌ ಮಗ್ಗ ಕಾರ್ಮಿಕರು

ಪರಿಹಾರ ಘೋಷಣೆ- 2000 ರೂ. ಒಟ್ಟು ಕಾರ್ಮಿಕರ ಸಂಖ್ಯೆ- 1.25 ಲಕ್ಷ ಬಂದಿರುವ ಅರ್ಜಿ – 57,449 ಪರಿಹಾರ ಪಡೆದವರು – 48,004 ಪಾವತಿಸಿದ ಮೊತ್ತ- 9.60 ಕೋಟಿ

ಕೈಮಗ್ಗ ನೇಕಾರರು

ಪರಿಹಾರ ಘೋಷಣೆ- 2000 ರೂ. ಒಟ್ಟು ಇರುವ ನೇಕಾರರು- 54,000 ಬಂದಿರುವ ಅರ್ಜಿ – 50,511 ಪರಿಹಾರ ಪಡೆದವರು- 46,259 ಪಾವತಿಸಿದ ಮೊತ್ತ- 9.25 ಕೋಟಿ

 

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next