ಚಿತ್ರದುರ್ಗ: ಕೋವಿಡ್ ಎರಡನೇ ಹಂತದ ಅಲೆಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದರಾಜ್ಯ ಸರ್ಕಾರ ಬುಧವಾರದಿಂದ 14 ದಿನಗಳಕಾಲ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆಮಾಡಿರುವುದರಿಂದ ಕೋಟೆನಾಡು ಚಿತ್ರದುರ್ಗ ಸ್ಥಬ್ದಗೊಂಡಿದೆ.
ದಿನವೂ ನೂರಾರು ಪ್ರಯಾಣಕರು, ಹತ್ತಾರುಬಸ್‌ಗಳಿಂದ ಗಿಜಿಗುಡುತ್ತಿದ್ದ ಸರ್ಕಾರಿ ಹಾಗೂಖಾಸಗಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.ನಗರದಲ್ಲಿ ಎಲ್ಲಾ ಬಗೆಯ ಅಂಗಡಿ, ಮುಂಗಟ್ಟುಗಳುಬಂದ್ ಆಗಿರುವುದರಿಂದ ರಸ್ತೆಗಳು ಪ್ರಶಾಂತವಾಗಿಮಲಗಿಬಿಟ್ಟಿವೆ.
ಕೆಲವರು ಬೈಕ್‌ಗಳಲ್ಲಿ ಕಾರ್ಯನಿಮಿತ್ತತಿರುಗಾಡುತ್ತಿರುವುದನ್ನು ಬಿಟ್ಟರೆ ಬೇರೆ ಎಲ್ಲಿಯೂಜನಸಂದಣಿಯಿಲ್ಲ. ತುರುವನೂರು ರಸ್ತೆ, ಚಳ್ಳಕೆರೆಗೇಟ್, ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ ಹಾಗೂರಾಷ್ಟ್ರೀಯ ಹೆದ್ದಾರಿ-13 ಹೊರವಲಯದಲ್ಲಿಪೊಲೀಸ್ ಕಾವಲು ಕಾಯುತ್ತಿದ್ದು, ಬೇರೆಊರುಗಳಿಂದ ಇಲ್ಲಿಗೆ ಬರುವವರನ್ನು ತಡೆದುವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ ಎಲ್ಲೆಡೆ ಬಿಗಿಬಂದೋಬಸ್ತ್ ಏರ್ಪಡಿಸಿದ್ದು, ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ.
ಬೆಳಿಗ್ಗೆ ಆರರಿಂದ ಹತ್ತು ಗಂಟೆಯತನಕ ನಗರದಹಳೆ ಮಾಧ್ಯಮಿಕ ಶಾಲಾ ಆವರಣ ಹಾಗೂ ಸರ್ಕಾರಿವಿಜ್ಞಾನ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆಅವಕಾಶ ಕಲ್ಪಿಸಿರುವುದರಿಂದ ನಾಲ್ಕು ತಾಸು ತರಕಾರಿಗೆಜನ ಮುಗಿಬೀಳುವುದನ್ನು ಹೊರತುಪಡಿಸಿದರೆಉಳಿದಂತೆ ದಿನವಿಡಿ ಯಾರು ರಸ್ತೆಯಲ್ಲಿ ವಿನಾಕಾರಣ ಓಡಾಡುವುದು ಕಂಡು ಬರುತ್ತಿಲ್ಲ. ಆಸ್ಪತ್ರೆ,ಬ್ಯಾಂಕ್, ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತಬರುವವರ ಸಂಖ್ಯೆಯೂ ವಿರಳವಾಗಿದೆ.ರೈತರ ಬೆಳೆಗಳನ್ನು ಖರೀ ದಿಸಬೇಕಾಗಿದ್ದಎ.ಪಿ.ಎಂ.ಸಿ ಮೌನವಾಗಿದೆ. ಕೆಲಸವಿಲ್ಲದೆಹಮಾಲಿಗಳು ತಮ್ಮ ಎತ್ತು ಗಾಡಿಗಳ ಜತೆ ತಲೆ ಮೇಲೆಕೈಹೊತ್ತು ಕೂತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು.ಒಟ್ಟಾರೆ ಕೊರೋನಾ ನಿಗ್ರಹಕ್ಕೆ ಮನೆಯಲ್ಲಿರುವುದುಅನಿವಾರ್ಯ ವಾಗಿರುವುದರಿಂದ ಸಾರ್ವಜನಿಕರುಉತ್ತಮವಾಗಿ ಸ್ಪಂದಿಸಿದ್ದಾರೆ.