Advertisement

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

03:46 AM Jul 07, 2020 | Sriram |

ಮುಂಬಯಿ: ಕೋವಿಡ್ ಭೀತಿಯ ಈ ಕಾಲಘಟ್ಟ ದಲ್ಲಿ ತೆಂಗಿನೆಣ್ಣೆ ಬಳಕೆ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದೆಲ್ಲೆಡೆ ಕೋವಿಡ್ ಅಟ್ಟಹಾಸ ಮೆರೆಯು ತ್ತಿದ್ದರೂ ಕೇರಳಿಗರು ಅದರ ಬಾಧೆಗೆ ಹೆಚ್ಚು ತುತ್ತಾಗದೆ ಇರುವುದು ಕೆಲವು ವಿಜ್ಞಾನಿ ಗಳ ಗಮನ ಸೆಳೆದಿದೆ. ತೆಂಗಿ ನೆಣ್ಣೆಯ ರೋಗ ನಿರೋಧಕ ಗುಣಗಳ ಬಗೆಗಿನ ಚರ್ಚೆಗೆ ನಾಂದಿ ಹಾಡಿದೆ.

Advertisement

ತೆಂಗಿನೆಣ್ಣೆಯ ನಿಯಮಿತ ಬಳಕೆಯಿಂದ ಕೋವಿಡ್ ವನ್ನು ನಿಯಂತ್ರಿಸಬಹುದು ಎಂಬ ಸಿದ್ಧಾಂತ ದಡಿಯಲ್ಲಿ ಕೆಲವು ಸಂಶೋಧಕರು ಜರ್ನಲ್‌ ಆಫ್ ಅಸೋಸಿಯೇಶನ್‌ ಫಿಸಿಶಿಯನ್ಸ್‌ ಇಂಡಿಯಾ (ಜೆಎಪಿಐ) ಎಂಬ ನಿಯತ ಕಾಲಿಕದಲ್ಲಿ ಲೇಖನ ಪ್ರಕಟಿಸಿದ್ದಾರೆ.

ತೆಂಗಿನೆಣ್ಣೆಯ ರೋಗ ನಿರೋಧಕ ಗುಣ ಮತ್ತು ಸೂಕ್ಷ್ಮಾಣು ಜೀವಿಗಳ ವಿರುದ್ಧ ತೆಂಗಿನೆಣ್ಣೆಯ ಅಂಶ ಹೋರಾಡುವ ಪರಿಯನ್ನು ಲೇಖನದಲ್ಲಿ ವಿವರಿಸಲಾಗಿದೆ.

ತೆಂಗಿನೆಣ್ಣೆಯಲ್ಲಿ ಲಾರಿಕ್‌ ಆಮ್ಲ, ಸ್ಯಾಚುರೇಟೆಡ್‌ ಕೊಬ್ಬಿನ ಆಮ್ಲ ಇರುತ್ತವೆ. ಇವನ್ನು ದೇಹ ಶೀಘ್ರ ಹೀರಿಕೊಳ್ಳು ತ್ತದೆ. ಲಾರಿಕ್‌ ಆಮ್ಲ ದೇಹವನ್ನು ಸೇರಿದ ಬಳಿಕ ಮೋನೋ ಲಾರಿನ್‌ ಆಗಿ ಬದಲಾಗಿ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾ, ವೈರಾಣುಗಳನ್ನು ಕೊಲ್ಲುತ್ತದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ| ಶಶಾಂಕ್‌ ಜೋಶಿ ತಿಳಿಸಿದ್ದಾರೆ.

ಕೇರಳದಲ್ಲಿ ಬಳಕೆ ಹೆಚ್ಚು
ತೆಂಗಿನೆಣ್ಣೆಯನ್ನು ಸುಮಾರು 4 ಸಾವಿರ ವರ್ಷ ಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿ ಹೆಚ್ಚು. ಆದ್ದರಿಂದಲೇ ಅವರು ಕೋವಿಡ್ ವಿರುದ್ಧ ಹೋರಾಡಲು ಮಿಕ್ಕೆಲ್ಲ ರಾಜ್ಯಗಳ ಜನರಿಗಿಂತ ಹೆಚ್ಚು ಶಕ್ತರಾಗಿದ್ದಾರೆ. ಆದರೆ ಕೊಬ್ಬರಿ ಎಣ್ಣೆಯ ಬಳಕೆಯಿಂದ ಕೋವಿಡ್ ವೈರಾಣು ನಿಗ್ರಹಿಸಬಹುದೇ ಅಥವಾ ಕೋವಿಡ್ ಸೋಂಕುಪೀಡಿತರು ಬೇಗನೆ ಗುಣಮುಖ ರಾಗಲು ತೆಂಗಿನೆಣ್ಣೆಯ ಸೇವನೆ ಸಹಾಯ ಮಾಡುತ್ತ ದೆಯೇ ಎಂಬುದರ ಬಗ್ಗೆ ವಿಶೇಷವಾದ ಪ್ರಯೋಗಗಳು ನಡೆಯಬೇಕಿದೆ ಎಂದು ಡಾ| ಜೋಶಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next