ಉಳ್ಳಾಲ: ಕೇರಳದಲ್ಲಿ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕಾಸರಗೋಡು ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದೆ. ಹೀಗಾಗಿ ತಲಪಾಡಿ ಗಡಿಭಾಗದಲ್ಲಿ ಕೋವಿಡ್ ಚೆಕ್ ಪೋಸ್ಟ್ ಪುನರಾರಂಭ ಮಾಡಲಾಗಿದೆ.
ತಹಶೀಲ್ದಾರ್, ಡಿಹೆಚ್ಓ ಹಾಗೂ ಪೊಲೀಸರಿಂದ ಕೇರಳದಿಂದ ಬರುವವರ ವಿಚಾರಣೆ ನಡೆಸಲಾಗುತ್ತಿದೆ. ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದಲ್ಲಿ ಮಾತ್ರ ನಾಳೆಯಿಂದ ದಕ್ಷಿಣ ಕನ್ನಡ ಪ್ರವೇಶ ನೀಡುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.
ಇದನ್ನೂ ಓದಿ:ಕೋವಿಡ್-19: ಒಂದೇ ದಿನ 14,199 ಹೊಸ ಪ್ರಕರಣ, ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣ
ಕೇರಳದಿಂದ ಉದ್ಯೋಗಕ್ಕೆಂದು ದ.ಕ. ಜಿಲ್ಲೆಗೆ ದಿನನಿತ್ಯ ಬಂದು ಹೋಗುವವರು ಪ್ರತೀ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಬೇಕಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವ ಕಾರ್ಯ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಬಸ್ ನಿರ್ವಾಹಕರಿಗೆ ಹೊಣೆ: ಕೇರಳದಿಂದ ಬರುವ ಬಸ್‌ಗಳ ನಿರ್ವಾಹಕರು ಪ್ರಯಾಣಿಕರನ್ನು ವಿಚಾರಿಸಿ 72 ಗಂಟೆಗಳ ಒಳಗೆ ನಡೆಸಲಾದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇರುವವರನ್ನಷ್ಟೇ ಪ್ರಯಾಣಿಸಲು ಅನುವು ಮಾಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಫೇಸ್ ಬುಕ್ ಲೈವ್ ಮಾಡುತ್ತಲೇ ಮೈಮರೆತ ಯುವಕರು; ಬೋಟ್ ಮಗುಚಿ ಇಬ್ಬರು ಸಾವು
ಇಂದು ಮಹತ್ವ ಸಭೆ: ಕೇರಳ ಪ್ರಯಾಣಿಕರ ವಿಚಾರಕ್ಕೆ ಸಂಬಂಧಪಟ್ಟಂತೆ ಫೆ. 22ರಂದು ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಜತೆಗೆ ಆರೋಗ್ಯ ಸಚಿವ ಡಾ| ಸುಧಾಕರ್ ಜತೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಕೂಡ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ: ಉದ್ಧವ್ ಠಾಕ್ರೆ ಎಚ್ಚರಿಕೆ