ತುಮಕೂರು: ಭಾನುವಾರ ಜಿಲ್ಲೆಯಲ್ಲಿ 138 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4243ಕ್ಕೆಏರಿಕೆಯಾಗಿದ್ದು ಸೋಂಕಿನಿಂದ ಐವರು ಮೃತಪಟ್ಟಿದ್ದು ಮೃತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ ಎಂದು ಡಿಎಚ್‌ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ತುಮಕೂರು-46, ಕುಣಿಗಲ್-5, ತಿಪಟೂರು-10, ಮಧುಗಿರಿ-20, ಪಾವಗಡ-16, ಗುಬ್ಬಿ-21, ತುರುವೇ ಕೆರೆ-2, ಚಿಕ್ಕನಾಯಕನಹಳ್ಳಿ-5, ಕೊರಟ ಗೆರೆ -7, ಶಿರಾ-6 ಸೇರಿ ಒಟ್ಟು 138 ಮಂದಿಯಲ್ಲಿ ಕೋವಿಡ್-19 ಸೋಂಕಿ ರುವುದು ದೃಢಪಟ್ಟಿದೆ ಎಂದರು.
ಜಿಲ್ಲೆಯಲ್ಲಿ ಈ ವರೆಗೆ 65134 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 55245 ಜನರಿಗೆ ನೆಗೆಟಿವ್ ಬಂದಿದೆ. ಅದರಲ್ಲಿ ನಿಗಾವಣೆಯಲ್ಲಿ 42244 ಜನರಿದ್ದು ಪ್ರಥಮ ಸಂಪರ್ಕ 18479, ದ್ವೀತಿಯ 23785 ಜನರಿದ್ದು, ಅದರಲ್ಲಿ 3089 ಜನ ಗುಣಮುಖ ರಾಗಿದ್ದಾರೆ. ಇನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 1020 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೋವಿಡ್ ಗೆ ಐದು ಬಲಿ: ತುಮಕೂರು ನಗರದ ಪಿ.ಎಚ್. ಕಾಲೋನಿಯ 55 ವರ್ಷದ ವ್ಯಕ್ತಿ, ಗುಬ್ಬಿ ತಾಲೂಕಿನ ಅಡಿಕಿಕೆರೆ ಗ್ರಾಮದ 65 ವರ್ಷದ ವೃದ್ಧ, ಇದೇ ತಾಲೂಕಿನ ಗಂಗಸಂದ್ರ ಗ್ರಾಮದ 75 ವರ್ಷದ ವೃದ್ಧ, ಕುಣಿಗಲ್ ತಾಲೂಕುಸಂತೇಮಾವತ್ತೂರು ಗ್ರಾಮದ 65 ವರ್ಷದ ವೃದ್ಧೆ, ಕೊರಟಗೆರೆ ತಾಲೂಕು ತುಂಬಾಡಿ ಗ್ರಾಮದ 65 ವರ್ಷದ ವೃದ್ಧ ಕೋವಿಡ್ ದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರು.