ಸಿಡ್ನಿ: ಸಿಡ್ನಿಯಲ್ಲಿ ಮತೆ ಕೋವಿಡ್ ಪ್ರಕರಣಗಳು ಕಂಡುಬಂದ ಕಾರಣ ಭಾರತ-ಆಸ್ಟ್ರೇಲಿಯ ನಡುವಿನ ನ್ಯೂ ಇಯರ್ ಟೆಸ್ಟ್ ಪಂದ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಸಿಡ್ನಿಯ ನಾರ್ದರ್ನ್ ಬೀಚಸ್‌ನಲ್ಲಿ ಹೊಸತಾಗಿ 28 ಕೋವಿಡ್-19 ಪ್ರಕರಣ ಕಂಡುಬಂದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯ ತನ್ನ ವೈದ್ಯಕೀಯ ತಜ್ಞರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ಆಟಗಾರರೆಲ್ಲ ಜೈವಿಕ ಸುರಕ್ಷಾ ವಲಯದಲ್ಲಿರುವುದರಿಂದ ಯಾವುದೇ ಆತಂಕವಿಲ್ಲ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯ ಮಧ್ಯಂತರ ಸಿಇಒ ನಿಕ್ ಹಾಕ್ಲೆ ಹೇಳಿದ್ದಾರೆ.
ಇದನ್ನೂ ಓದಿ:ರೊನಾಲ್ಡೊ, ಮೆಸ್ಸಿ ಹಿಂದಿಕ್ಕಿ ವರ್ಷದ ಫುಟ್ಬಾಲಿಗ ಪ್ರಶಸ್ತಿ ಪಡೆದ ಪೋಲೆಂಡ್ ತಂಡದ ನಾಯಕ
ಬ್ರೆಟ್ ಲೀ ವಾಪಸ್
ಇದೇ ವೇಳೆ ಅಡಿಲೇಡ್ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಚಾನೆಲ್ 7 ಮತ್ತು ಫಾಕ್ಸ್ ಸ್ಪೋರ್ಟ್ಸ್ ನ ಅನೇಕ ಸಿಬಂದಿಯನ್ನು ಮುನ್ನೆಚ್ಚರಿಕೆಯ ಕಾರಣಕ್ಕಾಗಿ ತವರಿಗೆ ಕಳುಹಿಸಲಾಗಿದೆ. ಇವರಲ್ಲಿ ಮಾಜಿ ವೇಗಿ ಬ್ರೆಟ್ ಲೀ ಕೂಡ ಸೇರಿದ್ದು, ಅವರೀಗ ಸಿಡ್ನಿಯ ತಮ್ಮ ಮನೆಗೆ ವಾಪಸಾಗಿದ್ದಾರೆ.