Advertisement
ಬೃಹನ್ಮುಂಬಯಿ ಮಹಾನಗರ ಪಾಲಿಕೆ, ತನ್ನ ವ್ಯಾಪ್ತಿಯಲ್ಲಿರುವ ಮಾಲ್‌ಗಳು, ಬಸ್‌ನಿಲ್ದಾಣ ಸಹಿತ ಜನರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಒಟ್ಟು 47 ಸಾವಿರ ಸೋಂಕು ಪತ್ತೆ ಪರೀಕ್ಷೆಗೆ ಪಾಲಿಕೆ ಗುರಿ ಹಾಕಿದೆ.
Related Articles
Advertisement
8-10 ತಿಂಗಳು ರಕ್ಷಣೆ: ಗುಲೇರಿಯಾ ಕೊರೊನಾ ಲಸಿಕೆಯಿಂದ 8-10 ತಿಂಗಳ ಕಾಲ ರಕ್ಷಣೆ ಸಿಗಲಿದೆ ಎಂದು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೇಶದಲ್ಲಿ ಲಸಿಕೆ ಪಡೆದುಕೊಂಡಿದ್ದ ರಿಂದ ಭಾರೀ ಪ್ರತಿಕೂಲ ಪರಿಣಾಮಗಳು ಕಂಡುಬಂದಿಲ್ಲ ಎಂದಿದ್ದಾರೆ.
ಸಚಿವ ಆದಿತ್ಯ ಠಾಕ್ರೆಗೆ ಸೋಂಕು :
ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆಗೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ” ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಪರೀಕ್ಷೆಯ ಬಳಿಕ ದೃಢಪಟ್ಟಿದೆ’ ಎಂದು ಬರೆದುಕೊಂಡಿದ್ದಾರೆ.
ಎಂಟು ರಾಜ್ಯಗಳಲ್ಲಿ ಹೆಚ್ಚು: ದಿಲ್ಲಿ ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕು ಏರಿಕೆಯಾಗುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕ, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ದಿಲ್ಲಿ ಇದೆ. ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಸೋಂಕು ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಮದುವೆಯಂಥ ಕಾರ್ಯಕ್ರಮ ಕಾರಣ: ಸೋಂಕು ಹೆಚ್ಚಳಕ್ಕೆ ಮದುವೆಯಂಥ ಕಾರ್ಯಕ್ರಮಗಳು ಕಾರಣ. ಜನರು ಈಗ ಹೆಚ್ಚಿನ ಎಚ್ಚರಿಕೆ ವಹಿಸುತ್ತಿಲ್ಲ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್ ತಿಳಿಸಿದ್ದಾರೆ. ಅದುವೇ ಸೂಪರ್‌ಸ್ಪ್ರೆಡ್ ಆಗಿದೆ ಎಂದಿದ್ದಾರೆ.