Advertisement

ದಾವಣಗೆರೆ : ಮಂಗಳವಾರ 24 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆ

09:06 PM Nov 17, 2020 | Suhan S |

ದಾವಣಗೆರೆ : ದಾವಣಗೆರೆಯಲ್ಲಿ ಮಂಗಳವಾರ 24 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.

Advertisement

ದಿನೇ ದಿನೇ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು ಮಂಗಳವಾರ ಸೋಂಕಿನಿಂದ ಗುಣಮುಖರಾಗಿ  55 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ‌ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 12, ಹರಿಹರದ 5, ಜಗಳೂರಿನ 1, ಚನ್ನಗಿರಿಯ 4, ಹೊನ್ನಾಳಿಯ 2 ಜನರು ಸೇರಿದಂತೆ 24 ಜನರಿಗೆ ಸೋಂಕು ಪತ್ತೆಯಾಗಿದೆ.

ದಾವಣಗೆರೆ ನಗರ ಮತ್ತು ಇತರೆ ಭಾಗದಲ್ಲಿ 23, ಹರಿಹರದ 11, ಜಗಳೂರಿನ 4, ಚನ್ನಗಿರಿಯ 7, ಹೊನ್ನಾಳಿಯ 9 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದಂತೆ 55  ಜನರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 21311  ಪ್ರಕರಣಗಳಲ್ಲಿ ಈವರೆಗೆ 20790 ಜನರು ಗುಣಮುಖರಾಗಿದ್ದಾರೆ. 258 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next