Advertisement
ರಾಜ್ಯದಲ್ಲಿ ರವಿವಾರ 12,000 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಆ ಮೂಲಕ ರಾಜ್ಯದ ಪಾಸಿಟಿವಿಟಿ ದರ ಶೇ.6.33ಕ್ಕೆ ಏರಿಕೆಯಾಗಿದ್ದು, ಹತ್ತು ದಿನದಲ್ಲಿ ದಿನವೊಂದಕ್ಕೆ ಸರಾಸರಿ 4,000 ಕೊರೊನಾ ಸೋಂಕು ದೃಢವಾಗಿದೆ. ಬೆಂಗಳೂರು ನಗರದಲ್ಲಿ 9,020 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 40,000 ಸಕ್ರಿಯ ಪ್ರಕರಣಗಳಿವೆ. ಆ ಮೂಲಕ ಸೋಂಕಿನ ಪ್ರಮಾಣ ಶೇ.10ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಶೇ.3.91 ಪಾಸಿಟಿವಿಟಿ ದರ ದಾಖಲಾಗಿದೆ.
ಬೆಂಗಳೂರು ಹೊರತುಪಡಿಸಿದರೆ, ಉಳಿದೆಲ್ಲ ಜಿಲ್ಲೆಯಲ್ಲಿ ನಿತ್ಯ 100 ಸೋಂಕು ಸಮೀಪಿಸುತ್ತಿರುವ ಕಡೆಯಲ್ಲಿ ಏಕಾಏಕಿಯಾಗಿ ನಿತ್ಯ ದಾಖಲಾಗುವ ಪ್ರಕರಣಗಳ ಸಂಖ್ಯೆ 400ರ ಸಮೀಪಿಸುತ್ತಿದೆ. ಮೈಸೂರಿನಲ್ಲಿ 398, ಉಡುಪಿ 348, ದ.ಕ. 298, ಮಂಡ್ಯ 261, ಶಿವಮೊಗ್ಗ 198, ತುಮಕೂರು 190, ಧಾರವಾಡ 147, ಹಾಸನ 182,ಬಳ್ಳಾರಿ 107, ಬೆಳಗಾವಿ 105 ಪ್ರಕರಣಗಳು ಪತ್ತೆಯಾಗಿದೆ. 18 ಜಿಲ್ಲೆಯಲ್ಲಿ ಸೋಂಕು ಹೆಚ್ಚಳ
ಬೆಂಗಳೂರು ಗ್ರಾಮಾಂತರ 98, ಕಲಬುರಗಿ 98, ಉತ್ತರ ಕನ್ನಡ 94, ಕೋಲಾರ 83, ಚಿಕ್ಕಮಗಳೂರು 78, ವಿಜಯಪುರ 49, ಚಿಕ್ಕಬಳ್ಳಾಪುರ 44, ದಾವಣಗೆರೆ 30, ಕೊಡಗು 29, ಚಾಮರಾಜನಗರ 26, ಚಿತ್ರದುರ್ಗ 24, ಬೀದರ್ 20, ರಾಮನಗರ 20, ಕೊಪ್ಪಳ 19, ಯಾದಗಿರಿ 10, ಹಾವೇರಿ 8, ರಾಯಚೂರು ಹಾಗೂ ಗದಗ 7 ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ನಗರ 2, ಬಳ್ಳಾರಿ, ದ.ಕ. ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ಮರಣ ಪ್ರಕರಣ ದಾಖಲಾಗಿದೆ. ಪ್ರಸ್ತುತ ಗುಣಮುಖರಾಗುವವರ ಪ್ರಮಾಣ ಶೇ.97.11 ಇದೆ. 49,602 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಜ.9ರಂದು 901 ಮಂದಿ ಗುಣಮುಖರಾಗಿದ್ದಾರೆ.
Related Articles
ಸೋಂಕು ಅಧಿಕ
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದ ಸೋಂಕಿಗೆ ತುತ್ತಾದವರಲ್ಲಿ ಶೇ. 70ರಷ್ಟು ಸೋಂಕಿನ ಪ್ರಕರಣಗಳು 40 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಂಡಿದೆ. ಜ.1ರಿಂದ ದಿನದಿಂದ ಜ.9ರ ವರೆಗೆ 11.48 ಲಕ್ಷ ಮಂದಿಯ ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 6.48 ಲಕ್ಷ ಮಂದಿ ಪುರುಷರ ಹಾಗೂ 5 ಲಕ್ಷ ಮಹಿಳೆಯರ ಸ್ವಾéಬ್‌ಗಳನ್ನು ಪರೀಕ್ಷೆ ಒಳಪಡಿಸಲಾಗಿದೆ. ಅದರಲ್ಲಿ 27,988 ಪುರುಷರಲ್ಲಿ ಹಾಗೂ 20,545 ಮಹಿಳೆಯರಿಗೆ ಸೋಂಕಿಗೆ ತುತ್ತಾಗಿದ್ದಾರೆ. ಆ ಮೂಲಕ 15ದಿನಗಳಲ್ಲಿ ಅತ್ಯಧಿಕ ಸಂಖ್ಯೆ ಪುರುಷರಲ್ಲಿ ಸೋಂಕು ದೃಢಗೊಳ್ಳುತ್ತಿರುವುದು ವರದಿಗಳ ಅಂಕಿ ಅಂಶಗಳ ದೃಢಪಡಿಸುತ್ತಿವೆ.
Advertisement