Advertisement
ಬಾಗಲಕೋಟೆ: ಜಿಲ್ಲೆಯಲ್ಲೇ ಅತಿದೊಡ್ಡ ವಿಧಾನಸಭೆ ಕ್ಷೇತ್ರವೆಂಬ ಖ್ಯಾತಿ ಪಡೆದ ಬೀಳಗಿ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಅಷ್ಟೊಂದು ಪತ್ತೆಯಾಗಿಲ್ಲ. ಇಲ್ಲಿ ಸಾವು-ನೋವು ಪ್ರಮಾಣವೂ ಕಡಿಮೆ.
Related Articles
Advertisement
ಉಚಿತ ಟ್ಯಾಕ್ಸಿ-ಆಂಬ್ಯುಲೆನ್ಸ್ ಸೇವೆ: ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ನಿರಾಣಿ ಫೌಂಡೇಶನ್ ಹಾಗೂ ಬಿಜೆಪಿ ಘಟಕದಿಂದ ಸೋಂಕಿತರು, ಕೊವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ಮತ್ತು ಗುಣಮುಖರಾದವರನ್ನು ಮನೆಗೆ ತಲುಪಿಸಲು 5 ಟ್ಯಾಕ್ಸಿಗಳು ಒದಗಿಸಲಾಗಿದೆ. ಉಸಿರಾಟ-ಗಂಭೀರ ಸಮಸ್ಯೆ ಹೊಂದಿದ ಸೋಂಕಿತರ ತುರ್ತು ವೈದ್ಯಕೀಯ ನೆರವಿಗಾಗಿ 2 ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ್ದು, ಅದಕ್ಕೆ ಕರೆ ಮಾಡಿ, ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
24 ಗಂಟೆ ಆರೋಗ್ಯ ಸಹಾಯವಾಣಿ: ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು, ನಿರಾಣಿ ಫೌಂಡೇಶನ್ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರನ್ನೊಳಗೊಂಡ ಸಹಾಯವಾಣಿ ಆಸ್ಪತ್ರೆ, ಕೇರ್ ಸೆಂಟರ್, ಆಂಬ್ಯುಲೆನ್ಸ್, ಎಮರ್ಜೆನ್ಸಿ ಟ್ಯಾಕ್ಸಿ ಸೇರಿದಂತೆ ಹಲವು ಸೌಕರ್ಯ ನೀಡಲು ಹಾಗೂ ಕೊರೊನಾ ಸಂಬಂಧಿ ಮಾಹಿತಿ ನೀಡಲು ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ. ತಾಲೂಕು ಆಸ್ಪತ್ರೆ ವೈದ್ಯ ಡಾ|ಕರೆನ್ನವರ- 94484 35195, ಡಾ| ವಿಲಾಸ ಕರವತಿಕರ- 91648 74231, ತಹಶೀಲ್ದಾರ್ ಶಂಕರ ಗೌಡಿ, 97399 76829 ಹಾಗೂ ನಿರಾಣಿ ಫೌಂಡೇಶನ್ ಸಂಚಾಲಕರು- 74837 49554 ಅವರನ್ನು ಸಂಪರ್ಕಿಸಬಹುದಾಗಿದೆ ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ.
100 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್: ಸೋಂಕಿನ ಲಕ್ಷಣಗಳು ಇಲ್ಲದ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ-ಆರೈಕೆ ಮಾಡಿಕೊಳ್ಳುವಂತೆ ನಿರ್ದೇಶನ ಮಾಡಿದ್ದು, ಅವರಿಗೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ಆರೋಗ್ಯ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ. ಕಡಿಮೆ ಗುಣ ಲಕ್ಷಣ ಹೊಂದಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೀಳಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಹಾಸಿಗಳ ಸುಸಜ್ಜಿತ ಕೇರ್ ಸೆಂಟರ್ ತೆರೆದಿದ್ದು, ನಿರಾಣಿ ಫೌಂಡೇಶನ್ ದಿಂದ ಉಚಿತ ಊಟ, ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಉಸಿರಾಟ ಸಮಸ್ಯೆ ಸೇರಿದಂತೆ ಹೆಚ್ಚಿನ ಗುಣಲಕ್ಷಣಗಳನ್ನು ಹೊಂದಿದ ಸೋಂಕಿತರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲು ಬೀಳಗಿ ತಾಲೂಕು ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. 50 ಆಕ್ಸಿಜನ್ ಬೆಡ್‌ಗಳು ಹಾಗೂ 3 ವೆಂಟಿಲೇಟರ್‌ಗಳ ಸೌಕರ್ಯವಿದ್ದು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹನಮಂತ ನಿರಾಣಿ ತಿಳಿಸಿದರು.
ಸ್ಯಾನಿಟೈಸರ್ ವಿತರಣೆ: ಕೊರೊನಾ ಸಂಕ್ರಮಣ ಘಟ್ಟದಲ್ಲಿ ಜೀವದ ಹಂಗು ತೊರೆದು ಸಮಾಜದ ಸ್ಯಾಸ್ಥ್ಯ ಕಾಪಾಡಲು, ಸೋಂಕು ಹತೋಟಿಗೆ ತರಲು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಉಚಿತ ಸ್ಯಾನಿಟೈಸರ್ ವಿತರಿಸಲಾಗುತ್ತಿದೆ.