ಗದಗ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 99 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 1764ಕ್ಕೇರಿದೆ.
ಅದರಲ್ಲಿ ಇಂದಿನ 53 ಸೇರಿ 633 ಜನರು ಗುಣಮುಖರಾಗಿದ್ದಾರೆ. ಇನ್ನುಳಿದಂತೆ 1091 ಸಕ್ರಿಯ ಪ್ರಕರಣಗಳಿದ್ದು, 648 ಜನರ ವರದಿ ಬರಬೇಕಿದೆ. ಗದಗ-45, ಮುಂಡರಗಿ-07, ನರಗುಂದ-13, ರೋಣ-22, ಶಿರಹಟ್ಟಿ-08 ಹಾಗೂ ಹೊರ ಜಿಲ್ಲೆಯ ಒಂದು ಸೇರಿದಂತೆ 96 ಪ್ರಕರಣಗಳು ಪತ್ತೆಯಾಗಿವೆ.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಹಮಾಲರ ಪ್ಲಾಟ್, ಸಂಭಾಪುರ ರೋಡ ಪೊಲೀಸ್ ಕ್ವಾರ್ಟರ್ಸ್, ಶರಣಬಸವೇಶ್ವರ ಸ್ಕೂಲ್ ಹತ್ತಿರ, ವರಸಿದ್ಧಿ ವಿನಾಯಕ ದೇವಸ್ಥಾನದ ಹತ್ತಿರ, ಕೆ.ಸಿ. ರಾಣಿ ರಸ್ತೆ, ಟ್ಯಾಗೋರ್ ರಸ್ತೆ, ಗೌರಿ ಗುಡಿ ಓಣಿ, ಹೆಲ್ತ್ ಕ್ಯಾಂಪ್, ಎಸ್‌ಎಂಕೆ ನಗರ, ಮಂಜುನಾಥ ನಗರ, ಬೆಟಗೇರಿ, ವಿವೇಕಾನಂದನಗರ ವಾಟರ್ ಟ್ಯಾಂಕ್ ಹತ್ತಿರ, ಶಿವಸಾಯಿನಗರ, ಕುಂಬಾರ ಓಣಿ, ಶಿವಾಜಿನಗರ, ಜೆ.ಟಿ. ಕಾಲೇಜ್ ಹತ್ತಿರ ಕರಡಿ ಅಡ್ಡೆ, ಒಕ್ಕಲಗೇರಿ ಓಣಿ, ರಾಮಮಂದಿರ ಹತ್ತಿರ ಹೆಲ್ತ್ ಕ್ಯಾಂಪ್, ಹುಡ್ಕೋ ಕಾಲನಿ, ಆರ್.ಕೆ. ನಗರ, ದೂಲಿ ಗಲ್ಲಿ, ಬೆಟಗೇರಿ, ಜವಳಿ ಗಲ್ಲಿ, ಕಬಾಡಿ ಓಣಿ. ಗದಗ ತಾಲೂಕಿನ ಬೆಳಹೊಡ, ಮುಳಗುಂದ, ಹುಲಕೋಟಿ, ಬಿಂಕದಕಟ್ಟಿ, ಕಳಸಾಪುರ, ನರಗುಂದ ಪಟ್ಟಣದ ಮೆಣಸಿನಕಾಯಿ ಓಣಿ, ವಿನಾಯಕ ನಗರ, ಹೊರಕೇರಿ ಓಣಿ, ನರಗುಂದ ತಾಲೂಕಿನ ಹದ್ಲಿ, ಕಲ್ಲಾಪುರ, ಸುರಕೋಡ, ರೋಣ ತಾಲೂಕಿನ ಸೂಡಿ, ಸೂಡಿ ವಾರ್ಡ್ ನಂ. 2, ಜನತಾ ಪ್ಲಾಟ್ ಮುಶಿಗೇರಿ, ಕಿಲ್ಲಾ ಹತ್ತಿರ ಮುಶಿಗೇರಿ, ಬಸ್ ಸ್ಟ್ಯಾಂಡ್ ಹತ್ತಿರ ಮುಶಿಗೇರಿ, ಹಿರೇಮಠ ಓಣಿ ನರೇಗಲ್, ಐಟಿಐ ಓಣಿ ನರೇಗಲ್, ರೋಣ ಪಟ್ಟಣದ ಸಂತೋಜಿ ಓಣಿ, ಪೊಲೀಸ್ ಸ್ಟೇಶನ್ ಶ್ರೀನಗರ, ಮುಂಡರಗಿ ಪಟ್ಟಣದ ಮಂಜುನಾಥ ನಗರ, ಮುಷ್ಟಿ ಓಣಿ, ಭಜಂತ್ರಿ ಓಣಿ. ಮುಂಡರಗಿ ತಾಲೂಕಿನ ಮುಂಡರಗಿ, ಎಸ್.ಆರ್.ಕೆ. ತಾಂಡಾ, ಕೊಟಿಬಾಗ್ ಹಿರೇವಡ್ಡಟ್ಟಿ, ವಡ್ಡರ ಓಣಿ ಹಿರೇವಡ್ಡಟ್ಟಿ, ಶಿರಹಟ್ಟಿ ಪಟ್ಟಣದ ಸಮಗಾರ ಓಣಿ, ವಾಲ್ಮೀಕಿ ಓಣಿ, ಶಿರಹಟ್ಟಿ, ತಾಲೂಕಿನ ಪಿ. ಬಡ್ನಿ ಶಾಲೆಯ ಹತ್ತಿರ, ಮಾಗಡಿ, ಶಿರಹಟ್ಟಿ, ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಓಣಿ ಹುಲಗೇರಿ ಬಣ, ಗಜೇಂದ್ರಗಡ ಪಟ್ಟಣದ ಕುಂಬಾರ ಓಣಿ, ಗಜೇಂದ್ರಗಡ ತಾಲೂಕಿನ ಗೋಗೇರಿ ಭಾಗದ ಜನರಲ್ಲಿ ಸೋಂಕು ದೃಢಪಟ್ಟಿದೆ.