Advertisement

ಮತ್ತೆ ಏಳು ಜನರಿಗೆ ವಕ್ಕರಿಸಿದ ಕೋವಿಡ್ ಸೋಂಕು

02:48 PM Aug 03, 2020 | Suhan S |

ಚಳ್ಳಕೆರೆ: ನಗರದಲ್ಲಿ ಭಾನುವಾರ ಏಳು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಪೊಲೀಸ್‌ ವಸತಿ ಗೃಹದಲ್ಲಿರುವ 65 ಮತ್ತು 55 ವರ್ಷದ ಇಬ್ಬರು ವೃದ್ಧರು, ಗಾಂಧಿನಗರದ 33 ವರ್ಷದ ಮಹಿಳೆ, ತ್ಯಾಗರಾಜ ನಗರದ 50 ವರ್ಷದ ಮಹಿಳೆ, ಶಾಂತಿನಗರ ಮತ್ತು ಹಳೇಟೌನ್‌ ವ್ಯಾಪ್ತಿಯ 21 ವರ್ಷದ ಯುವಕ, 12 ಮತ್ತು 3 ವರ್ಷದ ಇಬ್ಬರು ಬಾಲಕರ ವರದಿ ಪಾಸಿಟಿವ್‌ ಬಂದಿದೆ. ಇವರಲ್ಲಿ ಮೂವರು ವೃದ್ಧೆಯರನ್ನು ಚಿತ್ರದುರ್ಗದ ಕೋವಿಡ್‌ ಸೆಂಟರ್‌ಗೆ ದಾಖಲಿಸಲಾಗಿದ್ದು, ಉಳಿದವರನ್ನು ನಗರದ ಹೊರವಲಯದಲ್ಲಿರುವ ಕೋವಿಡ್‌ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ಪೌರಾಯುಕ್ತ ಪಿ. ಪಾಲಯ್ಯ ಮಾತನಾಡಿ, ಪಾಸಿಟಿವ್‌ ಪ್ರಕರಣಗಳ ಪ್ರದೇಶಗಳ ಕೆಲವು ಭಾಗಗಳನ್ನು ಈಗಾಗಲೇ ಸೀಲ್‌ಡೌನ್‌ ಮಾಡಲಾಗಿದೆ. ತ್ಯಾಗರಾಜ ನಗರದಲ್ಲಿ ಸೀಲ್‌ಡೌನ್‌ ಮುಂದುವರಿಸಲಾಗಿದೆ. ವೃತ್ತ ನಿರೀಕ್ಷಕರ ಕಚೇರಿ ಮತ್ತು ಪೊಲೀಸ್‌ ಠಾಣೆ ಸುತ್ತಮುತ್ತ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ನೈರ್ಮಲ್ಯ ಇಂಜಿನಿಯರ್‌ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ ದಾದಾಪೀರ್‌ ಮತ್ತು ಗಣೇಶ್‌ ಅವರಿಗೆ ಸೀಲ್‌ಡೌನ್‌ ಪ್ರದೇಶಗಳ ಉಸ್ತುವಾರಿ ವಹಿಸಲಾಗಿದೆ ಎಂದರು.

ಚಳ್ಳಕೆರೆ ಪೊಲೀಸ್‌ ಠಾಣೆಗೆ ಪ್ರವೇಶ ನಿರ್ಬಂಧ: ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೇದೆಗಳಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಠಾಣೆಯ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಿಬ್ಬಂದಿ ವರ್ಗ ಹೊರ ಭಾಗದಲ್ಲೇ ಇದ್ದು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಚಳ್ಳಕೆರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡಬೇಕು ಎಂದು ವೃತ್ತ ನಿರೀಕ್ಷಕ ಈ. ಆನಂದ ಮನವಿನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next