ಬೆಂಗಳೂರು : ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಕೇಸ್ ಸ್ಫೋಟಿಸುವ ಆತಂಕ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು,ಜನವರಿ 26ರ ಸುಮಾರಿಗೆ ರಾಜ್ಯದಲ್ಲಿ ಕೇಸ್ ಹೆಚ್ವಳವಾಗುವ ನಿರೀಕ್ಷೆ ಇದೆ. ಇದನ್ನೇ ತಜ್ಞರು ಅಂದಾಜಿಸಿದ್ದಾರೆ ಎಂದು ಹೇಳಿದರು.
ಕರ್ಫ್ಯೂ, ವೀಕ್ ಎಂಡ್ ಕರ್ಫ್ಯೂ ಕುರಿತು ಕುರಿತು ಶುಕ್ರವಾರ ಸಭೆ ನಡೆಯಲಿದೆ.ಕಿವಿ ಕಣ್ಣು ತೆರೆದು ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತಿಸಿದೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲದಕ್ಕೂ ಆದ್ಯತೆ ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಎಲ್ಲಾ ಕಡೆ ಟೆಸ್ಟ್ ಜಾಸ್ತಿ ಮಾಡಿ ಅಂತಾನೇ ಹೇಳುತ್ತಿರೋದು. ಟೆಸ್ಟ್ ಮಾಡಿಸಿಕೊಳ್ಳಿ ಅಂತಾ ನಾವು ಯಾರಿಗೂ ಫೋರ್ಸ್ ಮಾಡಲ್ಲ. ಟೆಸ್ಟ್ ಮಾಡಿ ಟ್ರೀಟ್ ಮಾಡಿ ಅಂತಾನೇ ಇವತ್ತಿಗೂ ನಿರ್ದೇಶನ ಇದೆ. ಬಿಯು ನಂಬರ್ ಸಮಸ್ಯೆ ಆಗುತ್ತಿರುವುದರ ಬಗ್ಗೆ ಗಮನ ಹರಿಸಲಾಗುತ್ತದೆ.ಬೇರೆ ದೇಶದಲ್ಲಿ ನಿರ್ವಹಣೆ ಮಾಡಲು ತತ್ತರಿಸಿ ಹೋಗಿದ್ದಾರೆ. ಸರ್ಕಾರ ಎಲ್ಲವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ಆದ್ಯತೆ ಕೊಟ್ಟು ಕೆಲಸ ಮಾಡುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಲಸಿಕೆ ಕೊಟ್ಟಿರುವ ಕಾರಣ ಯಾವುದೇ ಸಮಸ್ಯೆ ಇಲ್ಲದೆ ಮುಂದೆ ಸಾಗಲು ಸಾಧ್ಯವಾಗುತ್ತಿದೆ. ವಾಹನದಲ್ಲಿ ಹೇಗೆ ಬಂದು ಲಸಿಕೆ ಪಡೆಯುತ್ತಾರೋ ಹಾಗೆ ಇದೀಗ ಟೆಸ್ಟ್ ಕೂಡ ಮಾಡಿಸಬಹುದು. ಮನೆಗಳ ಮುಂದೆ ಬಂದು ಕೂಡ ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದರು.