Advertisement

ಹಟ್ಟಿ ಚಿನ್ನದ ಗಣಿ ಭದ್ರತಾ ಸಿಬ್ಬಂದಿಗೂ ಸೋಂಕು

08:24 AM Jun 17, 2020 | Suhan S |

ಹಟ್ಟಿ ಚಿನ್ನದ ಗಣಿ: ಬಳ್ಳಾರಿ ಜಿಂದಾಲ್‌ ಬಳಿಕ ಈಗ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿ ಕಂಪನಿಗೂ ಕೋವಿಡ್ ಸೋಂಕು ದಾಳಿ ಇಟ್ಟಿದೆ. ಕಂಪನಿ ಭದ್ರತಾ ಸಿಬ್ಬಂದಿಗೆ ಕೋವಿಡ್ ಸೋಂಕು ತಲುಲಿದ್ದು, ಉಳಿದ ಕಾರ್ಮಿಕರಿಗೆ ಆತಂಕ ಶುರುವಾಗಿದೆ.

Advertisement

ಸೋಂಕಿತ ವ್ಯಕ್ತಿ ಕಲಬುರ್ಗಿ ಸೇರಿದಂತೆ ಹೊರ ರಾಜ್ಯಕ್ಕೂ ಹೋಗಿ ಬಂದಿದ್ದಾನೆ ಎಂದು ತಿಳಿದು ಬಂದಿದೆ. ಸೋಂಕಿತನನ್ನು ರಾಯಚೂರಿನ ಕೋವಿಡ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಂಕಿತ ಸ್ವಯಂ ಪ್ರೇರಿತನಾಗಿ ಕೋವಿಡ್‌ ಪರೀಕ್ಷೆಗೊಳಪಟ್ಟಿದ್ದು, ಫಲಿತಾಂಶ ಬರುವ ಮುನ್ನವೇ ಕೆಲಸಕ್ಕೆ ಹಾಜರಾಗಿದ್ದಾನೆ. ತನ್ನ ಪತ್ನಿ ಆರೋಗ್ಯ ತಪಾಸಣೆಗಾಗಿ ಮಸ್ಕಿ ಆಸ್ಪತ್ರೆಗೂ ಭೇಟಿ ನೀಡಿದ್ದಾನೆ. ಇದರಿಂದ ದೇಶದಲ್ಲಿಯೇ ಚಿನ್ನ ಉತ್ಪಾದಿಸುವ ಏಕೈಕ ಗಣಿ ಕಂಪನಿಯಾದ ಹಟ್ಟಿ ಚಿನ್ನದ ಗಣಿ ಕಂಪನಿ ಮೇಲೆ ಕೊರೋನ ಸೋಂಕಿನ ಕರಿಮೋಡ ಕವಿದಂತಾಗಿದೆ.

ಸೋಂಕಿತ ಮೇ 20ರಿಂದ ಕಂಪನಿಯಲ್ಲಿ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸಿದ್ದಾನೆ. ತಹಶೀಲ್ದಾರ್‌ ಚಾಮರಾಜ ಪಾಟೀಲ, ಸಿಪಿಐ ಯಶವಂತ ಬಿಸ್ನಳ್ಳಿ, ಕೋವಿಡ್‌-19 ನೋಡಲ್‌ ಅ ಧಿಕಾರಿ ನಾಗರಾಜ ಗೌಡ, ವೈದ್ಯಾಧಿ ಕಾರಿ ಲಕ್ಷ್ಮೀಕಾಂತ, ಹಟ್ಟಿ ಪೊಲೀಸ್‌ ಠಾಣೆ ಪಿಎಸ್‌ಐ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸೋಂಕಿತನು ವಾಸಿಸುವ ಮನೆ ಸುತ್ತ-ಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್‌ ಝೋನ್‌ ಎಂದು ಘೋಷಿಸಿದ್ದು, 14 ದಿನಗಳವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ. ಸೋಂಕಿತನ ಪ್ರಥಮ ದ್ವಿತೀಯ ಸಂಪರ್ಕದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next