ಕಲಬುರಗಿ: ಕಲಬುರಗಿ ನಗರದ ಶಹಾಬಜಾರ್ ಪ್ರದೇಶದ 83 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಮಂಗಳವಾರದ ಆರೋಗ್ಯ ಬುಲೆಟಿನ್ ಖಚಿತಪಡಿಸಿದೆ.
ಸಾರಿ ಹಿನ್ನೆಲೆಯೊಂದಿಗೆ ವೃದ್ಧ ಮಾ.13 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ಮಾ.15 ರಂದು ನಿಧನ ಹೊಂದಿರುತ್ತಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 332 ಜನ ನಿಧನರಾಗಿದ್ದಾರೆ. ಎರಡನೇ ಹಂತದ ಕೊರೊನಾಗೆ ನಾಲ್ಕು ದಿನಗಳ ಹಿಂದೆ ಶಹಾಬಾದ ಪಟ್ಟಣದಲ್ಲೊಬ್ಬರು ಕೊರೊನಾಗೆ ಬಲಿಯಾಗಿದ್ದರು.
ಮಂಗಳವಾರ ಹೊಸದಾಗಿ 46 ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 22470 ಜನರಲ್ಲಿ ಕೊವಿಡ್ ಪತ್ತೆಯಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಕೊವಿಡ್ ನಿಯಂತ್ರಿಸಲು ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.