ಮಂಡ್ಯ: ಪ್ರಾಥಮಿಕ ಆರೋಗ್ಯ ಕೇಂದ್ರಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿಅವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿಶಾಸಕ ಎಂ.ಶ್ರೀನಿವಾಸ್ ಹಾಗೂ ನಗರಸಭೆಅಧ್ಯಕ್ಷ ಎಚ್.ಎಸ್.ಮಂಜು ಭೇಟಿ ನೀಡಿಪರಿಶೀಲನೆ ನಡೆಸಿದರು.
ನಗರದ ಮಿಮ್ಸ್ ಹಾಗೂ ಹೊರವಲಯದ ಒಕ್ಕಲಿಗರ ಸಂಘದ ಕೋವಿಡ್‌ಕೇರ್ ಸೆಂಟರ್‌ಗೆ ಭೇಟಿ ನೀಡಿ ಮಾಹಿತಿಪಡೆದರು. ಕೊರೊನಾ ಸೋಂಕಿತರಸಮಸ್ಯೆ ಆಲಿಸಿದ ಶಾಸಕರು, ಸೋಂಕಿತರಿಗೆಎಲ್ಲಾ ಸೌಲಭ್ಯ ಒದಗಿಸಬೇಕು ಎಂದುತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿಅವರಿಗೆ ಸೂಚಿಸಿದರು.
ಊಟದ ಗುಣಮಟ್ಟ ಪರಿಶೀಲನೆ:ಸೋಂಕಿತರಿಗೆ ಗುಣಮಟ್ಟದ ಊಟದ ಬಗ್ಗೆಗಮನಿಸಿದ ಶಾಸಕ ಎಂ.ಶ್ರೀನಿವಾಸ್,ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜುತಾವೇ ಸ್ವತಃ ರುಚಿ ನೋಡಿ ಗುಣಮಟ್ಟದಊಟ ನೀಡುವಂತೆ ಅಧಿ ಕಾರಿಗಳಿಗೆನಿರ್ದೇಶನ ನೀಡಿದರು.ಶಾಸಕ ಎಂ.ಶ್ರೀನಿವಾಸ್ ಮಾತನಾಡಿ,ಅವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನೆಲೆಪ್ರತಿದಿನ ಭೇಟಿ ನೀಡಿ ಸಮಸ್ಯೆ ಬಗ್ಗೆಪರಿಶೀಲನೆ ನಡೆಸಲಾಗುತ್ತಿದೆ ಎಂದುತಿಳಿಸಿದರು.
ಸೌಲಭ್ಯ ಒದಗಿಸಿದರೆ ಸೋಂಕಿತರುಶೀಘ್ರ ಗುಣಮುಖರಾಗಿ ಬಿಡುಗಡೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿ ಕಾರಿಗಳುಕೆಲಸ ನಿರ್ವಹಿಸಬೇಕು ಎಂದುಸೂಚಿಸಲಾಗಿದೆ ಎಂದರು. ನಗರಸಭೆಸದಸ್ಯ ಕೆ.ನಾಗೇಶ್ ಇದ್ದರು.ಅವ್ಯವಸ್ಥೆ ಕಿಡಿ: ಶುಕ್ರವಾರ ತಾಲೂಕಿನಹಲ್ಲೇಗೆರೆ, ಬಸರಾಳು, ಹನಕೆರೆ,ಕೆರಗೋಡು, ಶಿವಪುರ ಪ್ರಾಥಮಿಕಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಶಾಸಕಎಂ.ಶ್ರೀನಿವಾಸ್ ಅವ್ಯವಸ್ಥೆ ಕಂಡು ಗರಂಆದರು. ವ್ಯವಸ್ಥೆ ಸರಿಪಡಿಸುವಂತೆಡಿಎಚ್‌ಒ, ಟಿಎಚ್‌ಒ ಅವರಿಗೆಸೂಚಿಸಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿಸಚಿವರ ಗಮನಕ್ಕೂ ತಂದು ಕ್ರಮವಹಿಸುವಂತೆ ತಿಳಿಸಿದರು.