ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆಂದು ಮೀಸಲಿಟ್ಟಹಾಸಿಗೆಗಳ ಸಂಖ್ಯೆಯನ್ನು ಒಂದುಸಾವಿರಕ್ಕಿಳಿಸುವಂತೆ ರಾಜ್ಯ ಸರ್ಕಾರಕ್ಕೆಬಿಬಿಎಂಪಿಶಿಫಾರಸುನೀಡಿದೆ.
ಈ ಕುರಿತುಮಾಹಿತಿ ನೀಡಿದಬಿಬಿಎಂಪಿ ಮುಖ್ಯಆಯುಕ್ತ ಗೌರವ್‌ಗುಪ್ತ, ಸರ್ಕಾರದಸೂಚನೆಯಂತೆ ಮೇನಲ್ಲಿ 13 ಸಾವಿರಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆಂದು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿಮೀಸಲಿಡಲಾಗಿತ್ತು. ಸೋಂಕು ತಗ್ಗಿದ್ದ ಬೆನ್ನಲ್ಲೆಮೀಸಲು ಹಾಸಿಗೆಗಳ ಸಂಖ್ಯೆಯನ್ನುಸರ್ಕಾರಕ್ಕೆ ಮನವರಿಕೆ ಮಾಡಿ ಜೂನ್‌ಅಂತ್ಯಕ್ಕೆ ಆರು ಸಾವಿರಕ್ಕೆ ಇಳಿಸಲಾಗಿತ್ತು
.ಪ್ರಸ್ತುತ ನಿತ್ಯ ಸರಾಸರಿ 30 ಸೋಂಕಿತರುಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಮೀಸಲಿಟ್ಟ ಆರು ಸಾವಿರ ಹಾಸಿಗೆಗಳಲ್ಲಿ350ಮಾತ್ರ ಭರ್ತಿಯಾಗಿವೆ. ಇದರಿಂದ ಇತರೆರೋಗಿಗಳಿಗೆ ಹಾಸಿಗೆಸಮಸ್ಯೆಯಾಗಬಾರದುಎಂದು ಮೀಸಲು ಹಾಸಿಗೆ ಪ್ರಮಾಣವನ್ನುಒಂದು ಸಾವಿರಕ್ಕೆ ಇಳಿಸುವಂತೆ ಶಿಫಾರಸುನಿಡಲಾಗಿದೆ ಎಂದು ತಿಳಿಸಿದರು.
ಸದ್ಯಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಮುಂದೆಪ್ರಕರಣಗಳು ಹೆಚ್ಚಾದರೆ ಮತ್ತೆ ಹಾಸಿಗೆಗಳನ್ನುಶೀಘ್ರದಲ್ಲಿಯೇ ಹೆಚ್ಚಿಸಲು ಅಗತ್ಯ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಮೂರನೇ ಅಲೆಸಂದರ್ಭದಲ್ಲಿ ಹಾಸಿಗೆ ಹೆಚ್ಚಿಸುವ ಕುರಿತುಖಾಸಗಿ ಆಸ್ಪತ್ರೆಗಳ ಒಕ್ಕೂಟದ ಜತೆ ಮಾತುಕತೆನಡೆಸಿದ್ದೇವೆ ಎಂದರು.
ಪರೀಕ್ಷೆ ಕಡಿಮೆ ಮಾಡಿಲ್ಲ: ರಾಜಧಾನಿಯಲ್ಲಿಸೋಂಕು ಪರೀಕ್ಷೆಗಳನ್ನು ಕಡಿಮೆ ಮಾಡಿಲ್ಲ.ದೆಹಲಿ ಮತ್ತು ಮುಂಬೈಗಿಂತ ಎರಡು ಪಟ್ಟುಅಧಿಕ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ದಿನ ಒಂದರಲ್ಲಿ ನಡೆಯುವ ಅರ್ಧದಷ್ಟುಪರೀಕ್ಷೆಗಳು ಬೆಂಗಳೂರು ಒಂದರಲ್ಲಿಯೇನಡೆಯುತ್ತಿವೆ. ಅಗತ್ಯಕ್ಕಿಂತ ಹೆಚ್ಚು ಪರೀಕ್ಷೆನಡೆಸಿ ಸೋಂಕು ಹೆಚ್ಚದಂತೆ ಕ್ರಮವಹಿಸಲಾಗಿದೆ.
ಮುಂದಿನ ದಿನಗಳಲ್ಲಿಯೂ ಪರೀಕ್ಷೆಗಳಪ್ರಮಾಣಕಡಿಮೆ ಮಾಡುವುದಿಲ್ಲ ಎಂದರು.ನಗರದಲ್ಲಿ ಹೋಂ ಐಸೋಲೇಷನ್ ಡೆತ್‌ಆಡಿಟ್ ವರದಿ ನನ್ನ ಕೈ ಸೇರಿದೆ. ತಜ್ಞರ ಜತೆಈ ಬಗ್ಗೆ ಚರ್ಚೆ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.