Advertisement

ಕೋವಿಡ್ ನಿರ್ಮೂಲನೆಗೆ ಶ್ರಮಿಸಿ

07:17 PM Oct 20, 2020 | Suhan S |

ಮೊಳಕಾಲ್ಮೂರು: ಸಮಾಜದ ಪ್ರತಿಯೊಬ್ಬ ನಾಗರಿಕರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಹಾಮಾರಿ ಕೋವಿಡ್ ನಿರ್ಮೂಲನೆ ಮಾಡಲು ಶ್ರಮಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌. ನಿರ್ಮಲಾ ಕರೆ ನೀಡಿದರು.

Advertisement

ಪಟ್ಟಣದ ಜೆಎಂಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿತ್ರದುರ್ಗ, ತಾಲೂಕು ಕಾನೂನು ಸೇವಾ ಸಮಿತಿ ಮೊಳಕಾಲ್ಮೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್‌ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವ ವ್ಯಾಪಿ ಹರಡಿರುವ ಕ್ರೂರಿ ಕೋವಿಡ್ ನಮ್ಮ ದೇಶದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿ ಸಾಕಷ್ಟು ಸಾವು-ನೋವನ್ನುಂಟು ಮಾಡಿದೆ. ಜನಸಾಮಾನ್ಯರ ಜೀವನಕ್ಕೆ ಮಾರಕವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುವ ಹಂತ ತಲುಪಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಕೂಡ ಕುಂಠಿತವಾಗಿದೆ. ಕೋವಿಡ್ ಭೀತಿಯಿಂದ ನ್ಯಾಯಾಲಯ ಸೇರಿದಂತೆ ಇನ್ನಿತರ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಭಯದ ವಾತಾವರಣದಲ್ಲಿಯೇ ಕಾರ್ಯ ನಿರ್ವಹಿಸುವಂತಾಗಿದೆ. ಇಂತಹ ಭಯಾನಕ

ಕೋವಿಡ್ ಗೆ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸ್ಯಾನಿಟೈಸರ್‌ ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಕೋವಿಡ್ ನಿಯಂತ್ರಿಸಬಹುದು ಎಂದರು. ಮಾರಣಾಂತಿಕ ಕೋವಿಡ್ ವೈರಾಣು ಹರಡುವುದನ್ನು ತಡೆಯಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಯುಕ್ತವಾದ ವರ್ತನೆಯನ್ನು ಅನುಸರಿಸುವ ಮೂಲಕ ಬೇರೆಯವರೂ ಅನುಸರಿಸಲು ಉತ್ತೇಜನ ನೀಡಲಾಗುವುದು. ಯಾವಾಗಲೂ ಮತ್ತು ಸಾರ್ವಜನಿಕರೊಡನೆ ಇರುವಾಗ ಮುಖ ಕವಚವನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಲಾಗುವುದೆಂದು ಪ್ರತಿಜ್ಞಾ ವಿ ಧಿ ಬೋಧಿಸಿದರು.

ಜೆಎಂಎಫ್‌ಸಿ ನ್ಯಾಯಾಲಯದಿಂದ ಬಸ್‌ ನಿಲ್ದಾಣದ ಆವರಣದವರೆಗೂ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಬಸ್‌ ನಿಲ್ದಾಣದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಮಲ್ಲಿಕಾರ್ಜುನ,ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್‌ ನಾಯ್ಕ, ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್‌, ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಎಸ್‌. ಸವಿತಾ, ತಾಲೂಕು ಆರೋಗ್ಯಾಧಿ ಕಾರಿ ಡಾ| ಸುಧಾ, ವಕೀಲರ ಸಂಘದಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ವಕೀಲರಾದ ರಾಜಶೇಖರ ನಾಯಕ, ಪಿ.ಜಿ. ವಸಂತಕುಮಾರ್‌, ಎಂ.ಎನ್‌. ವಿಜಯಲಕ್ಷ್ಮೀ,ಹುಲುಗಪ್ಪ, ವಿ.ಡಿ. ರಾಘವೇಂದ್ರ, ಗಂಗಮೂರ್ತಿ,  ಡಿ.ಬಿ. ಬಸವರಾಜ್‌, ವೆಂಕಟೇಶ್‌, ತಿಮ್ಮಣ್ಣ, ಶೃತಿ, ಯರ್ರಿಸ್ವಾಮಿ, ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next