Advertisement

ಕೋವಿಡ್ ಜಾಗೃತಿ ಮೂಡಿಸಿದ ಸಿಇಒ

10:35 AM May 21, 2020 | Suhan S |

ಶಿರೂರ: ಕೋವಿಡ್ ಮಹಾಮಾರಿ ತಡೆಗಟ್ಟಲು ಪ್ರತಿಯೊಬ್ಬರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

Advertisement

ಶಿರೂರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಕೋವಿಡ್ ಜಾಗೃತಿ ಹಾಗೂ ಸ್ವಚ್ಛತೆ ಅರಿವು ಮೂಡಿಸಿದರು. ನಂತರ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ, ಕೆನರಾ ಬ್ಯಾಂಕ್‌, ಹೊಸಭಾವಿ ಹತ್ತಿರ, ಗ್ರಾಪಂ ಮುಂಭಾಗ, ಹೀಗೆ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕದೆ ಬೈಕ್‌ ಮೇಲೆ ಸಂಚರಿಸುವವರಿಗೆ ದಂಡ ವಿಧಿಸಿದರು. ನಂತರ ದುರ್ಗದ ಬೈಲಿನಲ್ಲಿನ ಮುಂಭಾಗದಿಂದ ಕೃಷಿಗಳಿಗೆ ತೆರಳುತ್ತಿದ್ದ ಅಜ್ಜಿಗೆ ಮಾಸ್ಕ್ ಹಾಕಿ ಅರಿವು ಮೂಡಿಸದರು.

ಪ್ರಾಥಮಿಕ ಶಾಲೆಯ ಹಿಂಭಾಗದ ಸಾರ್ವಜನಿಕ ಮಹಿಳಾ ಸೌಚಾಲಯವನ್ನು ತೆರುವುಗೊಳಿಸಿ ಪಕ್ಕದಲ್ಲಿಯೇ ಇರುವ ಲಂಡಿ ಹಳ್ಳವನ್ನು ಸcತ್ಛಗೊಳಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಪಂ ಪಿಡಿಒ ಅಮರೇಗೌಡ ಜಾರಡ್ಡಿ ಅವರಿಗೆ ಆದೇಶ ಮಾಡಿದರು. ತಾಪಂ ಇಒ ಎನ್‌.ವೈ. ಬಸರಿಗಿಡದ, ಪಿಡಿಒ ಅಮರೇಗೌಡ ಜಾರಡ್ಡಿ, ಗ್ರಾಪಂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next