ಚಾಮರಾಜನಗರ: ಮಾಜಿ ಸಚಿವರು ಹಾಗೂ ಮೂರುಬಾರಿ ಶಾಸಕರಾಗಿರುವ ಪುಟ್ಟರಂಗಶೆಟ್ಟರು ಲಾಕ್‌ಡೌನ್‌ನಸಂಕಷ್ಟದಲ್ಲಿರುವ ಕ್ಷೇತ್ರದ ಮತದಾರರಿಗೆ ಇನ್ನೂ ಹೆಚ್ಚಿನಸೇವೆ ಮಾಡಿ, ಸಂಪಾದನೆ ಮಾಡಿರುವ ಹಣದಲ್ಲಿಸ್ವಲ್ಪವನ್ನಾದರೂ ಈ ಸಂದರ್ಭದಲ್ಲಿ ಜನರಿಗೆ ನೀಡಬೇಕೆಂದುಬಿಜೆಪಿ ರೈತ ಮುಖಂಡ ಮಲ್ಲೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಶಾಸಕ ಪುಟ್ಟರಂಗಶೆಟ್ಟರು ಕೋವಿಡ್ ಲಾಕ್‌ಡೌನ್ ಮೊದಲ ಅಲೆಯಲ್ಲಿ ಬಹಳ ಉತ್ಸಾಹದಿಂದ ಕ್ಷೇತ್ರದಜನರಿಗೆ ಆಹಾರ ಕಿಟ್ ವಿತರಣೆ ಮಾಡಿರುವುದನ್ನುಸ್ವಾಗತಿಸುತ್ತೇವೆ. ಅದೇ ರೀತಿ 2ನೇ ಅಲೆಯಲ್ಲಿಯೂ ತಾವುನೀಡಿದ್ದರೆ ಮೂರು ಬಾರಿ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಜನರಿಗೆ ನ್ಯಾಯ ಸಿಗುತ್ತದೆ ಎಂದರು.
ಸಚಿವರಾಗಿ, ಶಾಸಕರಾಗಿ ಸಾಕಷ್ಟು ಸಂಪಾದನೆ ಮಾಡಿದ್ದು,ಅಸ್ತಿಯನ್ನೂ ಮಾಡಿದ್ದೀರಿ. ಇದೆಲ್ಲವೂ ಚಾ.ನಗರ ಕ್ಷೇತ್ರಜನರ ಕೊಡುಗೆ. ಕ್ಷೇತ್ರದ ಜನರಿಗೆ ಕೇವಲ ಎನ್ 95 ಮಾಸ್ಕ್ವಿತರಣೆ ಮಾಡಿದರೆ ಸಾಕೇ. ಕೊತ್ತಲವಾಡಿಯಲ್ಲಿ ತಂದೆತಾಯಿ ಕಳೆದುಕೊಂಡು ಅನಾಥವಾಗಿರುವ ಮಗುವಿಗೆಸಾಂತ್ವನ ಹೇಳಲು ತಾವು ಇನ್ನು ಹೋಗಿಲ್ಲ ಏಕೆ?ಕೊತ್ತಲವಾಡಿಯಲ್ಲಿ ನಿಮಗೆ ಮತ ಹಾಕಲ್ಲವೇ? ಎಂದುಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಸಾಮಾನ್ಯ ರೈತನ ಮಗನಾಗಿದ್ದು,ನಾನು ಒಂದು ಆ್ಯಂಬುಲೆನ್ಸ್, ಒಂದು ಕಾರನ್ನು ಆಸ್ಪತ್ರೆಸೇವೆಗೆ ಬಿಟ್ಟಿದ್ದೇನೆ. ಸಂತ್ರಸ್ಥ ಕುಟುಂಬಗಳಿಗೆ ಧನ ಸಹಾಯಮಾಡಿದ್ದೇನೆ. ತಾವು 3 ಬಾರಿ ಎಂಎಲ್‌ಎ ಆಗಿದ್ದೀರಿ.ಸಂತ್ರಸ್ಥ ಕುಟುಂಬಗಳಿಗೆ ಸಹಾಯ ನೀಡಿ ಎಂದರು.
ಕಳೆದ 20 ವರ್ಷಗಳ ಹಿಂದೆ ನಡೆದಿರುವ ಭೂಪರಿವರ್ತನೆ ಹಾಗೂ ಜಮೀನು ವಿವಾದವನ್ನು ಈಗತೆಗೆಯುವ ಮೂಲಕ ರೋಹಿಣಿ ಸಿಂಧೂರಿ ಚಾ.ನಗರಅಕ್ಸಿಜನ್ ದುರಂತ ಪ್ರಕರಣ ಮುಚ್ಚಿ ಹಾಕುವ ಹಾಗೂವಿಷಯಾಂತರ ಮಾಡುವ ಯತ್ನ ಮಾಡುತ್ತಿದ್ದಾರೆಂದರು.ಬಿಜೆಪಿ ಮುಖಂಡರಾದ ಬಿಸಲವಾಡಿ ಬಸವರಾಜು,ನಲ್ಲೂರು ಪರಮೇಶ, ಬಸವನಪುರ ರಾಜಶೇಖರ್, ಜ್ಯೊತಿಗೌಡನಪುರ ಸತೀಶ್ ಇದ್ದರು.