Advertisement

ಸಂಕಷ್ಟದಲ್ಲಿ ನೆರವು ನೀಡುವುದು ಕರ್ತವ್ಯ

09:01 PM May 31, 2021 | Team Udayavani |

ತುಮಕೂರು: ಕೊರೊನಾ ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಅರ್ಹರಿಗೆ ನೆರವುನೀಡುವುದು ಪ್ರತಿಯೊಬ್ಬ ನಾಗರಿಕರಕರ್ತವ್ಯವಾಗಿದೆ. ಬಡವರನ್ನುಗುರುತಿಸಿ ಅವರಿಗೆ ಆಹಾರ ಕಿಟ್‌ನೀಡುತ್ತಿರುವುದು ಉತ್ತಮ ಕಾರ್ಯಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

ನಗರದ ಸಿದ್ಧರಾಮೇಶ್ವರ ಬಡಾವಣೆ ಹಾಗೂ ಬಟವಾಡಿ ದಕ್ಷಿಣದ ಬಸವ ಭವನದಲ್ಲಿ ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿಯಿಂದನಡೆದ ಸಾರ್ವಜನಿಕರು, ಪೌರಕಾರ್ಮಿಕರಿಗೆ ಆಹಾರಕಿಟ್‌ ವಿತರಣೆ ಸಮಾರಂಭದಲ್ಲಿ ಮಾತನಾಡಿ,ಮಹಾಲಕ್ಷ್ಮೀ ಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾಸಮಿತಿ ಅವರು ಸುಮಾರು 10-12 ವರ್ಷದಿಂದಸಾಮಾಜಿಕ ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಮಾಜಿಕ ಕಾರ್ಯ ಸಂತಸದ ವಿಚಾರ: ಕೊರೊನಾಪರಿಸ್ಥಿತಿಯಲ್ಲಿ ಸದರಿ ಸಮಿತಿಯವರು ಈ ಭಾಗದಬಡ ಕುಟುಂಬದ ಜನರನ್ನು ಗುರುತಿಸಿ, ಜನರಿಗೆಆಹಾರ ಕಿಟ್‌ ನೀಡಿ, ಸಾಮಾಜಿಕ ಕಾರ್ಯಮಾಡುತ್ತಿರುವುದು ಸಂತಸದ ವಿಚಾರ. ನಗರದ ಎಲ್ಲಾವಾರ್ಡ್‌ಗಳಲ್ಲಿ ಸಮಿತಿಯವರುಸಾರ್ವಜನಿಕರಿಗೆ ಸಹಾಯಮಾಡಿದರೆ, ಸರ್ಕಾರಕ್ಕೆ ಹಾಗೂತುಮಕೂರು ಮಹಾನಗರಪಾಲಿಕೆಗೆ ಹೊರೆ ಕಮ್ಮಿಯಾಗಲಿದೆಎಂದು ತಿಳಿಸಿದರು.

ಸಾರ್ವಜನಿಕರು ಹಾಗೂ ಪೌರಕಾರ್ಮಿಕರುಕರ್ತವ್ಯ ನಿರ್ವಹಿಸುವುದರೊಂದಿಗೆ ತಮ್ಮ ಹಾಗೂತಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವುದುತುಂಬಾ ಮುಖ್ಯವಾಗಿದೆ. ತಮಗೆ ಯಾವುದೇ ರೀತಿಕುಂದು ಕೊರತೆ ಇದ್ದರು ನಿಮ್ಮ ಸಹಾಯಕ್ಕೆನಾವಿರುತ್ತೇವೆ ಎಂದು ನುಡಿದರು.ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆರೇಣುಕಾ, ಪಿಎಸ್‌ಐ ಶೇಷಾದ್ರಿ, ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷಸೋಮಶೇಖರ್‌, ಪ್ರಧಾನ ಕಾರ್ಯದರ್ಶಿಜಯಪ್ರಕಾಶ್‌, ಖಜಾಂಚಿ ಹಾಗೂ ಕೈಗಾರಿಕೋದ್ಯಮಿಜಿ.ಜಗದೀಶ್‌, ಎಚ್‌.ಎಂ.ಶಿವಕುಮಾರಯ್ಯ,ಶೇಖರ್‌ ಹಾಜರಿದ್ದರು.ವಿತರಣೆ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next