Advertisement
ವಸತಿ ಸಮುತ್ಛಯದಲ್ಲಿ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆ ವೇಳೆ ಡೆಹರಾಡೂನ್‌ನಿಂದ ಬಂದ ವರೂ ಸೇರಿದ್ದರು. ಇವರಿಂದ ಇತರರಿಗೂ ಸೋಂಕು ದೃಢ ಪಟ್ಟಿದೆ. ವಸತಿ ಸಮು ತ್ಛಯದಲ್ಲಿರುವ 1,375 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬುಧವಾರದ ವರೆ ಗೆ 109 ಜನ ರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ದೃಢ ಪಟ್ಟ 109 ಮಂದಿಯಲ್ಲಿ ಎಲ್ಲರೂ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ.
Related Articles
Advertisement
ಎರಡನೇ ಅಲೆ ಅಲ್ಲ; ರೂಪಾಂತರ ಇಲ್ಲ ಬೆಂಗಳೂರು: ನರ್ಸಿಂಗ್ ಕಾಲೇಜುಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಏಕಾಏಕಿ ವರದಿಯಾಗಿರುವ ಕೊರೊನಾ ಪ್ರಕರಣಗಳು ಎರಡನೇ ಅಲೆ ಅಲ್ಲ ಎಂದು ವೈರಾಣು ತಜ್ಞ ಮತ್ತು ಕೊರೊನಾ ನಿಯಂತ್ರಣ ಸರ್ಕಾರದ ಸಲಹಾ ಸಮಿತಿ ಸದಸ್ಯ ಡಾ.ವಿ.ರವಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ ಮಾಧ್ಯಮ ಕಾರ್ಯಗಾರದಲ್ಲಿ ಮಾತನಾಡಿ, ನಿರಂತರವಾಗಿ ಕೆಲ ಪ್ರದೇಶದಲ್ಲಿ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿ ಪರಿಸ್ಥಿತಿ ಕೈ ಮೀರಿದರೆ ಅದನ್ನು ಕೊರೊನಾ ಎರಡನೇ ಅಲೆ ಎನ್ನಲಾಗುತ್ತದೆ. ಸದ್ಯ ಬೆಂಗಳೂರು ಮತ್ತು ಮಂಗಳೂರಿನ ಎರಡು ಮೆಡಿಕಲ್ ಕಾಲೇಜು ಮತ್ತು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೆ ಸೀಮಿತ ಅವಧಿಯಲ್ಲಿ ಏಕಾಏಕಿ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು. ಹೀಗಾಗಿ, ಇವುಗಳನ್ನು ಕೊರೊನಾ ಎರಡನೇ ಅಲೆ ಎನ್ನಲು ಸಾಧ್ಯವಿಲ್ಲ. ಒಂದು ವೇಳೆ ಆ ಪ್ರದೇಶ ಅಥವಾ ಸುತ್ತಮುತ್ತಲಿನಲ್ಲಿ ಮುಂದಿನ ದಿನಗಳಲ್ಲಿಯೂ ಪ್ರಕರಣಗಳು ಹೆಚ್ಚುತ್ತಲೇ ಸಾಗಿದರೇ ಎರಡನೇ ಅಲೆ ಎನ್ನಬಹುದು ಎಂದರು.
ದಕ್ಷಿಣ ಆಫ್ರಿಕ, ಬ್ರೆಜಿಲ್ ರೂಪಾಂತರ ಇಲ್ಲ : ಡಿಸೆಂಬರ್‌ನಿಂದ ಈವರೆಗೂ 86 ಮಂದಿಯ ಗಂಟಲು ದ್ರವವನ್ನು ವಂಶವಾಹಿನಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 25 ಮಂದಿಯಲ್ಲಿ ಬ್ರಿಟನ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ. ಈಗಾಗಲೇ ಇವರೆಲ್ಲಾ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೂ ದಕ್ಷಿಣ ಆಫ್ರಿಕ ಮತ್ತ ಬ್ರೆಜಿಲ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ವೈರಾಣು ತಜ್ಞ ಡಾ.ವಿ.ರವಿ ತಿಳಿಸಿದರು.
ಬುಧ ವಾರ 2,529 ಮಂದಿಗೆ ಲಸಿಕೆ ನಗ ರ ದಲ್ಲಿ ಬುಧ ವಾರ 1,591 ಜನ ಆರೋಗ್ಯ ಕಾರ್ಯಕರ್ತರು (ಎರಡನೇ ಸುತ್ತಿನ ಲಸಿಕೆ) ಸೇರಿ ದಂತೆ ಒಟ್ಟು 2,529 ಜನ ಕೋವಿಡ್ ಲಸಿಕೆ ಹಾಕಿ ಸಿ ಕೊಂಡಿ ದ್ದಾರೆ. 218 ಆರೋಗ್ಯ ಕಾರ್ಯಕರ್ತರು ಹಾಗೂ 720 ಕೋವಿಡ್ ಫ್ರೆಂಟ್ ಲೈನ್ ವಾರಿಯರ್ಸ್ ಸೇರಿದಂತೆ ಒಟ್ಟು 938 ಮಂದಿ ಮೊದಲ ಸುತ್ತಿನ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಬಿಬಿ ಎಂಪಿ ಆಯುಕ್ತ ಎನ್. ಮಂಜು ನಾಥ್ ಪ್ರಸಾದ್ ತಿಳಿ ಸಿ ದ್ದಾರೆ.
ಮತ್ತೆಕ್ಲಸ್ಟರ್ ಗಳಲ್ಲಿ ಭೀತಿ : ನಗರದಲ್ಲಿ ಮತ್ತೆ ಕ್ಲಸ್ಟರ್ ಗಳಲ್ಲಿ (ಒಂದು ನಿರ್ದಿಷ್ಟ ಪ್ರದೇ ಶ ದಲ್ಲಿ ಹೆಚ್ಚು ಕೊರೊನಾ ಸೋಂಕು ಪ್ರಕರಣ) ಸೋಂಕು ಭೀತಿ ಎದು ರಾ ಗಿದೆ. ಈ ಹಿಂದೆ ಪಾದರಾಯನಪುರ ಹಾಗೂ ಹೊಂಗ ಸಂದ್ರ ಸೇರಿದಂತೆ ನಗರದ ಕೆಲವು ನಿರ್ದಿಷ್ಟ ಪ್ರದೇ ಶ ದಲ್ಲಿ ಸೋಂಕು ಹೆಚ್ಚಿತ್ತು. ನಂತರ ಉಳಿದ ಭಾಗಕ್ಕೂ ಹಬ್ಬಿತು. ಈಗ ಕ್ಲಸ್ಟರ್ ಮಾದರಿ ಸೋಂಕು ಕಾಣಿ ಸಿ ಕೊಂಡರೆ, ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚು. ಅಲ್ಲದೆ, ಬಿಸಿಲು ಮಿಶ್ರಿತ ಗಾಳಿ ಕಾರಣದಿಂದ ಸಾಂಕ್ರಾಮಿಕ ರೋಗ ಹೆಚ್ಚುವ ಸಾಧ್ಯ ತೆಯೂ ಇದೆ. ಈ ವೇಳೆಯಲ್ಲಿ ನಿರ್ಲಕ್ಷ್ಯ ವಹಿ ಸದೆ ಎಚ್ಚರಿಕೆಯಿಂದ ಪರೀ ಕ್ಷೆ ಗೆ ಒಳ ಪ ಡ ಬೇಕು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.