Advertisement

ಮೂರ್ತಿ ತಯಾರಕರಿಗೆ 3ನೇ ಅಲೆ ಭೀತಿ

07:00 PM Aug 02, 2021 | Team Udayavani |

ವಿಶೇಷ ವರದಿ

Advertisement

ಹಾವೇರಿ: ಕೋವಿಡ್ ಒಂದನೇ ಅಲೆಯಿಂದ ಕಳೆದ ವರ್ಷ ಆರ್ಥಿಕ ಸಂಕಷ್ಟ ಎದುರಿಸಿದ್ದ ಗಣಪತಿ ಮೂರ್ತಿ ತಯಾರಕರಿಗೆ ಮತ್ತೆ ಮೂರನೇ ಅಲೆ ಎದುರಾಗುವ ಭೀತಿಯಿಂದ ಬದುಕು ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಆದಾಯವಿಲ್ಲದೆ ಗಣಪತಿ ಮೂರ್ತಿ ತಯಾರಿಕೆಯನ್ನೇ ನಂಬಿಕೊಂಡಿರುವ ಕುಟುಂಬದವರು ಸಂಕಷ್ಟ ಎದುರಿಸುವಂತಾಗಿದೆ. ಗಣೇಶ ಚತುರ್ಥಿ ಇನ್ನೂ ಎರಡು ತಿಂಗಳಿರುವಾಗಲೇ ಗಣಪತಿ ಮೂರ್ತಿ ತಯಾರಕರ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಕುಟುಂಬದ ಸದಸ್ಯರೆಲ್ಲರೂ ಸೇರಿ ನಿರಂತರವಾಗಿ ಕೆಲಸ ಮಾಡಿದರೂ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸಿ ಕೊಡುವುದು ಕಷ್ಟಕರವಾಗುತ್ತಿತ್ತು. ಆದರೆ ಕೊರೊನಾ ಸಂಪೂರ್ಣ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ಸೋಂಕು ಕಳೆದ ಎರಡು ವರ್ಷದಿಂದ ಗಣೇಶ ಮೂರ್ತಿ ತಯಾರಕರ ಬದುಕನ್ನೇ ಕಸಿದುಕೊಂಡಿದೆ.

ದೊಡ್ಡಮೂರ್ತಿಗಳ ತಯಾರಿಕೆಗೆ ಹಿಂದೇಟು: ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿದ್ದಂತೆ ಮೂರ್ತಿ ತಯಾರಕರು ಈ ವರ್ಷವಾದರೂ ದೊಡ್ಡ ಮೂರ್ತಿಗಳ ತಯಾರಿಕೆಗೆ ಬೇಡಿಕೆ ಬರಬಹುದು ಎಂದುಕೊಂಡಿದ್ದರು. ಆದರೆ ಈಗ ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಮೂರನೇ ಅಲೆ ಎಂದೇ ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಸಂಘಟಕರು ಈವರೆಗೂ ದೊಡ್ಡ ಮೂರ್ತಿ ತಯಾರಿಕೆಗೆ ಬೇಡಿಕೆ ಇಟ್ಟಿಲ್ಲ. ಹೀಗಾಗಿ ಕಲಾವಿದರೂ ದೊಡ್ಡ ಮೂರ್ತಿ ತಯಾರಿಸಲು ಸಿದ್ಧತೆ ಮಾಡಿಕೊಂಡಿಲ್ಲ. ದೊಡ್ಡಗಾತ್ರದ ಗಣಪತಿ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ತರಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ನೂರಾರು ಗಣಪತಿ ತಯಾರಿಸುವ ಕುಟುಂಬಗಳಿವೆ. ಕೊರೊನಾ ಮೂರನೇ ಅಲೆ ಎದುರಾದರೆ ತಯಾರಿಸಿದ ಗಣೇಶ ಮೂರ್ತಿಗಳು ಮಾರಾಟಗೊಳ್ಳದೇ ಮತ್ತೇ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂಬ ಕಾರಣಕ್ಕೆ ಮೂರ್ತಿ ತಯಾರಿಯ ಅನೇಕ ಕುಟುಂಬಗಳು ದೊಡ್ಡಗಾತ್ರದ ಮೂರ್ತಿ ತಯಾರಿಕೆಗೆ ಮುಂದಾಗಿಲ್ಲ.

Advertisement

ಚಿಕ್ಕಪುಟ್ಟ ಮೂರ್ತಿ ತಯಾರಿಕೆ: ಈಗಾಗಲೇ ಕಲಾವಿದರು ಮನೆಗಳಲ್ಲಿ ಪ್ರತಿಷ್ಠಾಪಿಸುವ ಚಿಕ್ಕಪುಟ್ಟ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವುಗಳಿಗೂ ಇನ್ನೂ ಯಾರಿಂದಲೂ ಬೇಡಿಕೆಯಿಲ್ಲ. ಕೊನೆಯ ಗಳಿಗೆಯಲ್ಲಾದರೂ ಮನೆಯಲ್ಲಿ ಪ್ರತಿಷ್ಠಾಪಿಸುವುದಕ್ಕೆ ಬೇಡಿಕೆ ಬರಬಹುದು ಎಂಬ ಆಶಯದೊಂದಿಗೆ ತಯಾರಿಸಲಾಗುತ್ತಿದೆ. ಸಂಭವನೀಯ ಕೊರೊನಾ ಮೂರನೇ ಅಲೆ ಭೀತಿ ಎಲ್ಲರಲ್ಲೂ ಮನೆ ಮಾಡಿದ್ದು, ಹಬ್ಬದ ಸಮಯಕ್ಕೆ ಯಾವ ರೀತಿಯ ಮಾರ್ಗಸೂಚಿಗಳು ಹೊರಬರುತ್ತವೋ ಗೊತ್ತಿಲ್ಲ. ಮೂರ್ತಿಪ್ರತಿಷ್ಠಾನೆಗೆ ಅವಕಾಶ ನೀಡುತ್ತಾರೋ, ಇಲ್ಲವೋ ಎಂಬ ಗೊಂದಲದಲ್ಲಿಯೇ ಕಾಲ ಕಳೆಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next