Advertisement

ಕೋವಿಡ್  2ನೇ ಅಲೆ : ಅರ್ಥ ವ್ಯವಸ್ಥೆಗೆ ಹೆಚ್ಚು ಪ್ರತಿಕೂಲ ಪರಿಣಾಮವಿಲ್ಲ

08:27 PM May 11, 2021 | Team Udayavani |

ನವದೆಹಲಿ: ದೇಶಕ್ಕೆ ತಟ್ಟಿರುವ ಕೊರೊನಾ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಗೆ ಹೆಚ್ಚಿನ ಪ್ರತಿಕೂಲ ಪರಿಣಾಮ ಉಂಟು ಮಾಡುವುದಿಲ್ಲ. ಹೀಗೆಂದು ರೇಟಿಂಗ್‌ ಸಂಸ್ಥೆ ಫಿಚ್‌ ಅಭಿಪ್ರಾಯಪಟ್ಟಿದೆ.

Advertisement

ಕಳೆದ ವರ್ಷ ಕಂಡುಬಂದಿದ್ದ ಮೊದಲ ಅಲೆಗೆ ಹೋಲಿಕೆ ಮಾಡಿದರೆ ಅದರ ಪ್ರತಿಕೂಲ ಪರಿಣಾಮ ಕಡಿಮೆಯೇ. ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್‌ ಮತ್ತು ಇತರ ನಿಯಂತ್ರಣ ಕ್ರಮಗಳನ್ನು ಮುತುವರ್ಜಿಯಿಂದ ಕೈಗೊಳ್ಳುತ್ತಿದ್ದಾರೆ ಎಂದು ಫಿಚ್‌, ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಕೇಂದ್ರ ವಿತ್ತ ಸಚಿವಾಲಯ ಕೂಡ ಏಪ್ರಿಲ್‌ಗೆ ಸಂಬಂಧಿಸಿದ ಮಾಸಿಕ ಆರ್ಥಿಕ ಮುನ್ಸೂಚನಾ ವರದಿಯಲ್ಲಿ ಕೂಡ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಗೆ ಹೆಚ್ಚಿನ ಋಣಾತ್ಮಕ ಪರಿಣಾಮ ಇರಲಾರದು ಎಂದು ತಿಳಿಸಿತ್ತು. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಕೊಂಚ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎನ್ನುವುದನ್ನು ಫಿಚ್‌ ಅಲ್ಲಗಳೆದಿಲ್ಲ.

ಇದನ್ನೂ ಓದಿ :ರಾಜ್ಯದಲ್ಲಿಂದು 39,510 ಹೊಸ ಕೋವಿಡ್ ಪ್ರಕರಣ ಪತ್ತೆ: 480 ಜನರ ಸಾವು, 22,584 ಮಂದಿ ಗುಣಮುಖ

ಸೋಂಕಿನ ಜತೆಗೇ ವ್ಯವಸ್ಥೆಯನ್ನು ನಿರ್ವಹಿಸಲು ಕಲಿತಿರುವುದರಿಂದ ಅರ್ಥ ವ್ಯವಸ್ಥೆಯ ಕೆಲವು ಚಟುವಟಿಕೆಗಳು ಮುಂದುವರಿಯಲಿವೆ. ಹೀಗಾಗಿ, ಅತ್ಯಂತ ಸಂಕಷ್ಟ ಸ್ಥಿತಿ ಬರಲಾರದು. 2ನೇ ತ್ತೈಮಾಸಿಕದಲ್ಲಿ ಕೊಂಚ ಚೇತರಿಕೆ ಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next