ಕೋಲ್ಕತಾ:ಕೋವಿಡ್ 19 ಸೋಂಕು ಪ್ರಕರಣ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 16ರಿಂದ ಮತ್ತೆ ಮುಂದಿನ 15 ದಿನಗಳ ಕಾಲ ಲಾಕ್ ಡೌನ್ ನಿರ್ಬಂಧ ವಿಸ್ತರಿಸಿರುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ(ಮೇ 15) ಘೋಷಿಸಿದ್ದಾರೆ.
ಇದನ್ನೂ ಓದಿ:ನಾಳೆಯಿಂದ ಫುಲ್ ಲಾಕ್ ಡೌನ್: ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು
ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಶ್ಚಿಮಬಂಗಾಳದಲ್ಲಿ ಶುಕ್ರವಾರ ದಾಖಲೆಯ 20,846 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿತ್ತು. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 10,94,802ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಇದಕ್ಕೂ ಮುನ್ನ ಏಪ್ರಿಲ್ 30ರಂದು ಪಶ್ಚಿಮಬಂಗಾಳದಲ್ಲಿ ಭಾಗಶಃ ಲಾಕ್ ಡೌನ್ ಜಾರಿಗೊಳಿಸಿತ್ತು. ಮೇ 16ರಿಂದ ವಿಸ್ತರಣೆಯಾಗಿರುವ ಲಾಕ್ ಡೌನ್ ವೇಳೆಯಲ್ಲಿ ಎಲ್ಲಾ ಖಾಸಗಿ ಕಚೇರಿಗಳು, ಶಾಲಾ, ಕಾಲೇಜು ಬಂದ್ ಆಗಿರಲಿದೆ ಎಂದು ಹೇಳಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಬಜಾರ್, ತರಕಾರಿ ಮಾರುಕಟ್ಟೆಗಳು, ಹಣ್ಣು ಮಾರಾಟ, ಹಾಲು, ಬ್ರೆಡ್ ವ್ಯಾಪಾರಕ್ಕೆ ಬೆಳಗ್ಗೆ 7ರಿಂದ 10ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ಸ್ಥಳೀಯ ರೈಲು, ಮೆಟ್ರೋ, ಅಂತರಾಜ್ಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.