Advertisement

ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್-19 ಗೆ ಮೊದಲ ಬಲಿ

07:54 PM Jun 10, 2020 | Sriram |

ಧಾರವಾಡ :ಕೋವಿಡ್-19 ಸೋಂಕಿನ ಕಾರಣದಿಂದ ಧಾರವಾಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಮೇ.23 ರಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ಹುಬ್ಬಳ್ಳಿ ಗಿರಣಿ ಚಾಳ ನಿವಾಸಿ ಪಿ 1943 ( 58 ವರ್ಷ , ಪುರುಷ ) ಜೂನ್ 9 ರಂದು ರಾತ್ರಿ ಮೃತಪಟ್ಟಿದ್ದಾರೆ.

Advertisement

ಮಹಾರಾಷ್ಟ್ರ ರಾಜ್ಯದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರಲ್ಲಿ ಕೋವಿಡ್ ಪಾಸಿಟಿವ್ ಜೊತೆಗೆ ತೀವ್ರ ಉಸಿರಾಟದ ತೊಂದರೆ , ಮಧುಮೇಹ ,ಬಹು ಅಂಗಾಂಗ ವೈಫಲ್ಯ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳನ್ವಯ ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿಯಲ್ಲಿ ಜರುಗಿತು.

 

Advertisement

Udayavani is now on Telegram. Click here to join our channel and stay updated with the latest news.

Next