Advertisement
ಲಾಕ್‍ಡೌನ್‍ನಿಂದ ಅನ್ನಕ್ಕೂ ಪರದಾಡುವ ಸೂರಿಲ್ಲದವರ ಕುರಿತು ಖುದ್ದು ಪರಿಶೀಲಿಸಲು ಸೋಮವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಗೋವಿಂದರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್ ಅವರ ತಂಡ ನಗರ ಪ್ರದಕ್ಷಿಣೆ ನಡೆಸಿತ್ತು. ಈ ಹಂತದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ 13 ಹುಡುಗರ ತಂಡ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರ ಸಮಸ್ಯೆ ಆಲಿಸಲು ಮುಂದಾದ ಈ ಅಧಿಕಾರಿಗಳ ತಂಡ, ಊಟ-ವಸತಿ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಇದಲ್ಲದೇ ನಗರ ಪರಿವೀಕ್ಷಣೆ ಸಂದರ್ಭದಲ್ಲಿ ಅಲೇಮಾರಿ ಜನಾಂಗದ 100 ಕ್ಕೂ ಹೆಚ್ಚು ಅಲೇಮಾರಿಗಳು ಕಂಡು ಬಂದಿದ್ದು, ಅವರ ಸಮಸ್ಯೆ ಆಲಿಸಿದರು. ಆಲ್ಲದೇ ತಕ್ಷಣದಿಂದಲೇ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸುವ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪಾಲಿಕೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.