Advertisement

ದಕ್ಷಿಣ ಕನ್ನಡ: ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ: ಡಾ. ಹರ್ಷ ಎಚ್ಚರಿಕೆ

11:12 AM Mar 27, 2020 | Hari Prasad |

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲ್ಪಟ್ಟಿರುವ 9 ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದೆ. ಆದರೆ ಲಾಕ್ ಡೌನ್ ಘೋಷಣೆಯ ಬಳಿಕವೂ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಜನಜೀವನ ಸಾಮಾನ್ಯದಂತಿದ್ದು ಈ ಲಾಕ್ ಡೌನ್ ಉದ್ದೇಶವನ್ನೇ ಜನರು ಮರೆತಂತಿದೆ.

Advertisement

ಈ ಕಾರಣದಿಂದ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಾಗಿರುವ ಹರ್ಷ ಐ.ಪಿ.ಎಸ್. ಅವರು ತಿಳಿಸಿದ್ದಾರೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಅಂತವರ ಮೇಲೆ ಐಪಿಸಿ ಸೆಕ್ಷನ್ 188, 269 ಹಾಗೂ 270ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವುದು ಎಂದು ನಗರ ಆಯುಕ್ತರು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next