Advertisement

ತಮಿಳುನಾಡಿನಲ್ಲಿ ನಿಲ್ಲದ ಕೋವಿಡ್‌ ಕಾಟ

08:54 PM Jun 03, 2020 | Sriram |

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್‌-19 ವೈರಸ್‌ ಹಾವಳಿ ತೀವ್ರವಾಗಿ ಮುಂದುವರಿದಿದ್ದು, ಒಂದೇ ದಿನ 1286 ಪ್ರಕರಣಗಳು ಪತ್ತೆಯಾಗಿವೆ. ಜತೆಗೆ 11 ಮಂದಿ ಮೃತಪಟ್ಟಿದ್ದಾರೆ.

Advertisement

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 1 ಸಾವಿರಕ್ಕೂ ಮಿಕ್ಕಿ ಪಾಸಿಟಿವ್‌ ಕೇಸುಗಳು ಪತ್ತೆಯಾಗಿವೆ. ಇವರಲ್ಲಿ 15 ಮಂದಿ ವಿದೇಶದಿಂದ ಬಂದವರು. 27 ಪ್ರಕರಣಗಳು ಚೆನ್ನೈಯಲ್ಲೇ ಪತ್ತೆಯಾಗಿವೆ.

ಇದರೊಂದಿಗೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 25,872ಕ್ಕೆ ಏರಿಕೆಯಾಗಿದೆ. ಇದರಲ್ಲಿ ಚೆನ್ನೈ ನಗರದ ಪಾಲು 17,598 ಆಗಿದೆ. ಸದ್ಯ 11,345 ಚಾಲ್ತಿಯಲ್ಲಿರುವ ಪ್ರಕರಣಗಳಾಗಿವೆ.

ಬುಧವಾರ 610 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಮೃತಪಟ್ಟವರಲ್ಲಿ ಹಲವರು ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 208ಕ್ಕೇರಿದೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next