Advertisement
ಅಮೆರಿಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮಾತ್ರ ಸೋಂಕನ್ನು ನಿಯಂತ್ರಿಸುತ್ತಿದ್ದು, ಸದ್ಯಕ್ಕೆ ಅಪಾಯ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗವಾಗಿದೆ. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದ್ದು, ಬೇರೆ ರಾಜ್ಯಗಳಿಂದ ವೆಂಟಿಲೇಟರ್, ಔಷಧ ತರಿಸಿಕೊಳ್ಳಲಾಗಿದೆ. ಅಮೆರಿಕದಲ್ಲಿ ನ್ಯೂಯಾರ್ಕ್, ಮಿಚಿಗಾನ್, ಲೌಸಿಯಾನ್ ಹಾಟ್‌ಸ್ಪಾಟ್ ಪ್ರದೇಶಗಳಾಗಿವೆ. ಇದೇ ವೇಳೆ ನ್ಯೂಯಾರ್ಕ್‌ನಲ್ಲಿ ಒಂದೇ ದಿನ 760 ಮಂದಿ ಅಸುನೀಗಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ಮೂಲ ನಿವಾಸಿಗಳ ಬದುಕನ್ನೂ ಕೋವಿಡ್ ವೈರಸ್ ಆತಂಕಕ್ಕೆ ತಳ್ಳಿದೆ. ಪರೀಕ್ಷೆಗೊಳಪಟ್ಟ ಬಹುತೇಕರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅನೇಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸರಕಾರ ನೀಡದೇ ಇದ್ದರೂ, ಇಂಡಿಯನ್ – ಅಮೆರಿಕನ್ ಸಮುದಾಯದ ಸಂಸ್ಥೆಗಳ ಹೇಳಿಕೆ ಆಧರಿಸಿ, ಅಂದಾಜಿಸಲಾಗಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಇದುವರೆಗೆ 1,70,000 ಪಾಸಿಟಿವ್ ಪ್ರಕರಣಗಳಲ್ಲಿ, 5,700 ಮಂದಿ ಭಾರತೀಯ ಮೂಲದವರೇ ಇದ್ದಾರೆ. ಕೊರೊನಾ ಸೋಂಕು ತೀವ್ರಗೊಂಡಿದ್ದು, ಯುಎನ್‌ಐ ಸುದ್ದಿ ಸಂಸ್ಥೆಯ ವರದಿಗಾರ ಬ್ರಹ್ಮ ಕುಚಿಬೋಟ್ಲಾ ಸೋಮವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
Related Articles
Advertisement