ಹೊಸದಿಲ್ಲಿ: ಕೋವಿಡ್ ವೈರಸ್ ನ ಹೊಸ ಲಕ್ಷಣಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಕೆಮ್ಮು, ಶೀತ, ಉಸಿರಾಟ ತೊಂದರೆ- ಆರಂಭಿಕ ಸಮಸ್ಯೆಗಳಾಗಿದ್ದವು.
ಕೆಲದಿನಗಳ ಹಿಂದೆ, ವಾಸನೆ- ರುಚಿ ನಷ್ಟ ಕೂಡ ಸೇರ್ಪಡೆ ಆಗಿತ್ತು. ಈಗ ಕೈ ಜುಮ್ಮೆನ್ನುವುದು ಕೋವಿಡ್ ನ ಹೊಸ ಲಕ್ಷಣವಾಗಿ ದೃಢಪಟ್ಟಿದೆ.
ಕೈಯಲ್ಲಿ ಸೂಕ್ಷ್ಮವಾಗಿ ಜುಮ್ಮೆನ್ನಿಸುವ ನೋವು ಕಾಣಿಸಿಕೊಂಡರೆ, ಅದು ಕೋವಿಡ್ ವೈರಸ್ ಸೋಂಕಿನ ಸೂಚನೆಯೂ ಆಗಿರಬಹುದು ಎಂದು ‘ಎಕ್ಸ್‌ಪ್ರೆಸ್.ಕೊ.ಯುಕೆ’ ಪತ್ರಿಕೆಗೆ ತಜ್ಞರು ತಿಳಿಸಿದ್ದಾರೆ.
ಅಂದರೆ, ಈ ಅನುಭವ ವಿದ್ಯುತ್ ಶಾಕ್ ಹೊಡೆದಂತೆಯೇ ಇರುತ್ತದೆ. ಕೋವಿಡ್ ಸೋಂಕಿತರಲ್ಲಿ ಅನೇಕರಿಗೆ ಹೀಗಾಗಿದೆ. ಕೆಲವರಿಗೆ ಅಂಗೈ ಮೇಲ್ಭಾಗದಲ್ಲಿ, ಮತ್ತೆ ಕೆಲವರಿಗೆ ಬೆರಳಿನ ತುದಿಯಲ್ಲಿ ಜುಮ್ಮುಗಟ್ಟುವಿಕೆ ಕಾಣಿಸಿಕೊಂಡಿದೆ.
‘ರೋಗ ನಿರೋಧಕ ಕೋಶಗಳು ತೀವ್ರ ಪ್ರತಿರೋಧಕ್ಕಿಳಿದಾಗ, ದೇಹದಲ್ಲಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ ಹಾಗಾಗಿ ನರಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ ಮತ್ತು ಇದರಿಂದ ಕೈ ಜುಮ್ಮುಗುಡುತ್ತದೆ’ ಎಂದು ಡಾ| ವಲೀದ್ ಜಾವೇದ್ ವಿಶ್ಲೇಷಿಸಿದ್ದಾರೆ.