Advertisement

83 ಕೋಟಿ ಮಂದಿಗೆ ಕೋವಿಡ್ 19 ವೈರಸ್ ಬಡತನ

08:05 PM Apr 01, 2020 | Hari Prasad |

ಕೋವಿಡ್ 19 ವೈರಸ್ ನಿಂದಿಂದಾಗಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ವಲಯ ವ್ಯಾಪ್ತಿಯಲ್ಲಿ ಸುಮಾರು 83 ಕೋಟಿ ಜನ ಬಡತನಕ್ಕೆ ನೂಕಲ್ಪಡಲಿದ್ದಾರೆ ಎಂದು ವಿಶ್ವ ಬ್ಯಾಂಕ್‌ ಎಚ್ಚರಿಸಿದೆ. ಇದೇ ವೇಳೆ, ಸೋಂಕಿನಿಂದಾಗಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ವಲಯ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ದರ ಶೇ.2.1ಕ್ಕೆ ಕುಸಿಯಲಿದೆ.

Advertisement

2019ರಲ್ಲಿ ಈ ಪ್ರಮಾಣವನ್ನು ಶೇ.5.8ಕ್ಕೆ ಅಂದಾಜಿಸಲಾಗಿತ್ತು. ಚೀನದ ಆರ್ಥಿಕ ಬೆಳವಣಿಗೆ ದರ ಕೂಡ ಶೇ.2.3ಕ್ಕೆ ಕುಸಿಯಲಿದೆ ಎಂದಿದೆ. 2019ರಲ್ಲಿ ಚೀನದ ಆರ್ಥಿಕ ಬೆಳವಣಿಗೆ ದರವನ್ನು ಶೇ.6.1ಕ್ಕೆ ಅಂದಾಜಿಸಲಾಗಿತ್ತು.

ಕೋವಿಡ್ 19 ವೈರಸ್ ನಿಯಂತ್ರಣ ನಿಟ್ಟಿನಲ್ಲಿ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಅಗತ್ಯ ಎಂಬುದನ್ನು ವಿಶ್ವಬ್ಯಾಂಕ್‌ ಒತ್ತಿ ಹೇಳಿದೆ. ಈ ರಾಷ್ಟ್ರಗಳು ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಸಹಾಯಧನ ನೀಡಿಕೆ, ದಿಟ್ಟ ಆರ್ಥಿಕ ನಿರ್ಧಾರ, ನಿರ್ಧಿಷ್ಟ ಆರ್ಥಿಕ ಪ್ರಗತಿಯ ಗುರಿ ಸೇರಿದಂತೆ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next