ಹೈದರಾಬಾದ್: 55 ಲಕ್ಷ ಕೋವಿಡ್ ಲಸಿಕೆ “ಕೋವ್ಯಾಕ್ಸಿನ್” ಅನ್ನು ಸರಬರಾಜು ಮಾಡಲು ಭಾರತ ಸರ್ಕಾರ ಭಾರತ್ ಬಯೋಟೆಕ್ ಗೆ ಆರ್ಡರ್ ನೀಡಿದ್ದು, ಈ ನಿಟ್ಟಿನಲ್ಲಿ ಒಂದು ವೇಳೆ ರೋಗ ನಿರೋಧಕ ಲಸಿಕೆ ಪಡೆದ ನಂತರ ಯಾವುದೇ ತೆರನಾದ ಗಂಭೀರ ಅಡ್ಡಪರಿಣಾಮ ಕಂಡುಬಂದಲ್ಲಿ ಲಸಿಕೆ ಪಡೆದವರಿಗೆ ಕಂಪನಿ ಪರಿಹಾರ ಪಾವತಿಸಲಿದೆ ಎಂದು ತಿಳಿಸಿದೆ.
ಲಸಿಕೆ ಪಡೆಯುವ ಮುನ್ನ ವ್ಯಕ್ತಿ “ಒಪ್ಪಿಗೆ ಪತ್ರಕ್ಕೆ” ಸಹಿ ಮಾಡಬೇಕಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದ್ದು, ಒಂದು ವೇಳೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಿದಲ್ಲಿ, ಸರಕಾರ ನಿಗದಿಪಡಿಸಿದ ಮತ್ತು ಅಧಿಕೃತ ಆಸ್ಪತ್ರೆಗಳಲ್ಲಿ ನಿಮಗೆ (ಲಸಿಕೆ ಪಡೆದವರಿಗೆ) ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದೆ.
ಒಂದು ವೇಳೆ ಲಸಿಕೆ ಪಡೆದಿದ್ದರಿಂದಲೇ ಗಂಭೀರ ಅಡ್ಡ ಪರಿಣಾಮ ಬೀರಿದೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾದರೆ ಲಸಿಕೆ ಪಡೆದ ವ್ಯಕ್ತಿಗೆ (ಬಿಬಿಐಎಲ್) ಪರಿಹಾರ ನೀಡಲಾಗುವುದು ಎಂದು ಒಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ನಾನು ಸಚಿವ ಸ್ಥಾನ ಕೇಳಿಲ್ಲ.. ಅವರು ಕೊಟ್ಟಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರೀಯೆ
ಪ್ರಥಮ ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ನಿಂದಾಗಿ ಕೋವಿಡ್ 19 ವಿರುದ್ಧದ ರೋಗನಿರೋಧಕ ಶಕ್ತಿಯಾಗಿ ಬಳಸಲು ಕೋವ್ಯಾಕ್ಸಿನ್ ಉತ್ಪಾದನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಏತನ್ಮಧ್ಯೆ ಲಸಿಕೆಯ ಕ್ಲಿನಿಕಲ್ ಪರಿಣಾಮದ ಬಗ್ಗೆ ಇನ್ನೂ ಸ್ಪಷ್ಟ ಫಲಿತಾಂಶ ಕಂಡು ಬಂದಿಲ್ಲ. ಇದನ್ನು 3ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಅಧ್ಯಯನ ಮಾಡಲಾಗುವುದು ಎಂದು ಲಸಿಕೆ ತಯಾರಿಕೆ ಕಂಪನಿ ತಿಳಿಸಿದೆ.
ಇದನ್ನೂ ಓದಿ:KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani