ವಾಷಿಂಗ್ಟನ್: ಕೋವಿಡ್-19 ವೈರಸ್ ನಿಂದ ಜರ್ಜರಿತವಾಗಿರುವ ಅಮೆರಿಕಾದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,480 ಜನರು ಮೃತರಾಗಿದ್ದು, ಒಟ್ಟಾರೆ ಸಾವಿನ ಪ್ರಮಾಣ 7,046ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಕೋವಿಡ್ 19 ವೈರಸ್ ಉಸಿರಾಡುವಾಗ ಮತ್ತು ಮಾತನಾಡುವಾಗಲು ಹರಡುತ್ತದೆ ಎಂದು ಅಮೆರಿಕಾದ ವಿಜ್ಞಾನಿಗಳ ತಿಳಿಸಿದ್ದಾರೆ.
ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ 1,480 ಜನರು ಸಾವನ್ನಪ್ಪಿರುವುದು ಜಾಗತಿಕ ದಾಖಲೆಯಾಗಿದೆ.
ಯುಎಸ್ ತನ್ನ ನಾಗರಿಕರಿಗೆ ಸಾವರ್ಜನಿಕವಾಗಿ ಸಂಚರಿಸುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಳ್ಳುವಂತೆ ಆದೇಶ ನೀಡಿದೆ. ಮಾತ್ರವಲ್ಲದೆ ವರದಿಯ ಪ್ರಕಾರ ಜಗತ್ತಿನಾದ್ಯಂತ ಜನರಿಗೆ ಸಾಮಾನ್ಯ ಉಸಿರಾಟದ ಮೂಲಕವೇ ಈ ವೈರಸ್ ಹರಡುತ್ತದೆ ಎಂದು ಹೇಳಲಾಗಿದೆ.
ವಿಶ್ವದಾದ್ಯಂತ 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದು, 50, ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.