Advertisement
ಆಯ್ದ ಸ್ಥಳಗಳನ್ನು ಬಫರ್ ಜೋನ್ ಎಂದು ಗುರುತಿಸುವುದು ಮತ್ತು ಕೋವಿಡ್ 19 ಹಾಟ್ ಸ್ಪಾಟ್‌ಗಳೆಂದು ಗುರುತಿಸಲಾಗಿರುವ ಪ್ರದೇಶಗಳನ್ನು ತಿಂಗಳ ಮಟ್ಟಿಗೆ ಸೀಲ್ ಮಾಡುವುದು ಕೇಂದ್ರದ ಹೊಸ ಯೋಜನೆಯ ಪ್ರಮುಖ ಅಂಶಗಳಾಗಿವೆ.
ಸೋಂಕಿನ ಹಾಟ್‌ಸ್ಪಾಟ್ ಮತ್ತು ಬಫರ್ ಜೋನ್ ಎಂದು ಗುರುತಿಸಿದ ಪ್ರದೇಶಗಳ ಶಾಲೆ, ಕಾಲೇಜು ಮತ್ತು ಎಲ್ಲ ಕಚೇರಿಗಳನ್ನು ಮುಚ್ಚಿಸಲಿದ್ದು, ವಾಹನಗಳ ಸಂಚಾರವನ್ನು ಸಂಪೂರ್ಣ ವಾಗಿ ನಿಷೇಧಿಸಲಾಗುತ್ತದೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತವೆ. ಹಾಗೆಯೇ ಪರಿಣಾಮಕಾರಿ ಸಾಮಾಜಿಕ ಅಂತರ ನಿಯಮದೊಂದಿಗೆ ಇತರ ಸಾರ್ವ ಜನಿಕ ಆರೋಗ್ಯ ಉಪಕ್ರಮಗಳು ಜಾರಿಯಾದರೆ ಮಾತ್ರ ಸೋಂಕಿನ ನಿಯಂತ್ರಣ ಸಾಧ್ಯ ಎಂದು ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ.