ಚಂಡೀಗಢ್:ಮಹತ್ವದ ಬೆಳವಣಿಗೆಯಲ್ಲಿ ಹರ್ಯಾಣ ಸರ್ಕಾರ ಕೋವಿಡ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 8ನೇ ತರಗತಿಯಿಂದ 12ನೇ ತರಗತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ “ಟ್ಯಾಬ್ಲೆಟ್(ಮೊಬೈಲ್ ಕಂಪ್ಯೂಟರ್) ನೀಡಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಪರಿಶಿಷ್ಟ ಜಾತಿ, ಹಿಂದುಗಳಿದ ವರ್ಗ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ (ಮೊಬೈಲ್ ಕಂಪ್ಯೂಟರ್) ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. 8ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು.
ಇದರಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಪರಿಗಣಿಸಲಾಗಿದೆ ಎಂದು ಹರ್ಯಾಣ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳಿಗೆ “ಲೈಬ್ರೆರಿ(ಗ್ರಂಥಾಲಯ) ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಟ್ಯಾಬ್ಲೆಟ್(ಮೊಬೈಲ್ ಕಂಪ್ಯೂಟರ್) ನೀಡಲು ಹರ್ಯಾಣ ಸರ್ಕಾರ ನಿರ್ಧರಿಸಿದ್ದು, ಇದು ಸರ್ಕಾರಿ ಆಸ್ತಿಯಾಗಿರಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಶಿಕ್ಷಣದ ನಂತರ “ಟ್ಯಾಬ್ಲೆಟ್” ಅನ್ನು ವಾಪಸ್ ನೀಡಬೇಕು ಎಂದು ತಿಳಿಸಿದೆ.
ಈ ಎಲ್ಲಾ ಟ್ಯಾಬ್ಲೆಟ್ (ಮೊಬೈಲ್ ಕಂಪ್ಯೂಟರ್) ನಲ್ಲಿ ಪರೀಕ್ಷೆಗೆ ಸಂಬಂಧಿಸಿದ ಕಂಟೆಂಟ್, ವಿಡಿಯೋ ಹಾಗೂ ಡಿಜಿಟಲ್ ಪುಸ್ತಕಗಳನ್ನು ಅಪ್ ಡೇಟ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರಿ ಶಾಲೆಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ತಯಾರಿಸಿದ ಕಂಟೆಂಟ್ ಇದಾಗಿದೆ ಎಂದು ವಿವರಿಸಿದೆ.