Advertisement

ಕೋವಿಡ್-19: ವಿಜಯಪುರ ಜಿಲ್ಲೆಯ 12 ವರದಿ ಬಾಕಿ, ಮತ್ತೆ 12 ಪರೀಕ್ಷೆಗೆ

03:06 PM Apr 10, 2020 | keerthan |

ವಿಜಯಪುರ: ಕೋವಿಡ್-19 ಸೋಂಕು ಲಕ್ಷಣ ಇರುವ 12 ಜನರ ಗಂಟಲು ದ್ರವ ಪರೀಕ್ಷೆ ಮಾದರಿ ವರದಿ ಬರಬೇಕಿದ್ದು, ಇದೀಗ ಮತ್ತೆ 12 ಜನರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈವರೆಗೆ 75 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಿದ್ದು, 63 ವರದಿ ನೆಗೆಟಿವ್ ಬಂದಿವೆ ಎಂದರು.

ವಿದೇಶಗಳಿಂದ ಜಿಲ್ಲೆಗೆ ಬಂದಿರುವ 434 ಜನರಲ್ಲಿ 247 ಜನರು 28 ದಿನಗಳ ಹೋಂ ಕ್ವಾರಂಟೈನ್ ನಿಗಾ ಪೂರೈಸಿದ್ದಾರೆ. 149 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಪೀರಿಯಡ್ ಮುಕ್ತಾಯ ಮಾಡಿದ್ದಾರೆ. 38 ಜನರ ಕ್ವಾರಂಟೈನ್ ನಿಗಾದಲ್ಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next