Advertisement

ದಿನಕ್ಕೆ 200 ಮಂದಿಯಂತೆ ಬೆಂಗಳೂರಿನ 1000 ಪತ್ರಕರ್ತರ ಕೋವಿಡ್-19 ಪರೀಕ್ಷೆ

12:15 AM Apr 23, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಮುಂಬೈನ ಕೆಲ ಪತ್ರಕರ್ತರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ರಾಜ್ಯದಲ್ಲೂ ಪತ್ರಕರ್ತರಿಗೆ ಸೋಂಕು ಪರೀಕ್ಷೆ ಮಾಡಲು ಸರಕಾರ ಇಚ್ಚಿಸಿದ್ದು, ಐದು ದಿನದಲ್ಲಿ ಒಂದು ಸಾವಿರ ಪತ್ರಕರ್ತರ ಕೋವಿಡ್-19 ಸೋಂಕು ಪರೀಕ್ಷೆ ನಡೆಯಲಿದೆ.

Advertisement

ಬೆಂಗಳೂರಿನ ಇಂದಿರಾನಗರದ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಸೋಂಕು ಪರೀಕ್ಷೆ ನಡೆಯಲಿದೆ. ಪ್ರತಿನಿತ್ಯ 200 ಮಂದಿಯಂತೆ ಐದು ದಿನದಲ್ಲಿ ನಗರದ ಒಟ್ಟು ಒಂದು ಸಾವಿರ ಪತ್ರೆಕರ್ತರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಯಲಿದೆ.

ಗುರುವಾರದಿಂದ ಐದು ದಿನಗಳ ಮಟ್ಟಿಗೆ ಈ ಸೋಂಕು ಪರೀಕ್ಷೆ ನಡೆಯಿದೆ. ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next