ಚೆನ್ನೈ:ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ತಮಿಳುನಾಡಿನಲ್ಲಿ ದಾಖಲೆ ಪ್ರಮಾಣದ 16,665 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಲಾಕ್ ಡೌನ್ ಮತ್ತು ಭಾನುವಾರದ ಕರ್ಫ್ಯೂವನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ:ಉತ್ತರಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಣೆ, 577 ಶಿಕ್ಷಕರ ಸಾವು!
ಲಾಕ್ ಡೌನ್ ನಿರ್ಬಂಧ, ರಾತ್ರಿ 10ಗಂಟೆಯಿಂದ ಮುಂಜಾನೆ 4ಗಂಟೆವರೆಗೆ ಹಾಗೂ ಭಾನುವಾರದ ಕರ್ಫ್ಯೂ ಮುಂದುವರಿಯಲಿದೆ. ಕೋವಿಡ್ ಸೋಂಕು ನಿಗ್ರಹಕ್ಕಾಗಿ ಮುಂದಿನ ಆದೇಶದವರೆಗೂ ರಾಜ್ಯದಲ್ಲಿ ಈ ಸೂಚನೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಹೊಸ ಮಾರ್ಗಸೂಚಿ ಪ್ರಕಾರ, ಮೇ 2ರಂದು ಭಾನುವಾರ ಮತಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಂಚಾರ, ಪಕ್ಷದ ಅಭ್ಯರ್ಥಿಗಳ ಓಡಾಟ, ಮತಗಟ್ಟೆ ಏಜೆಂಟ್, ಅಧಿಕಾರಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿದೆ.
ಭಾನುವಾರದ ಲಾಕ್ ಡೌನ್ ಹೊರತಾಗಿಯೂ ಚೆನ್ನೈ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕೋವಿಡ್ 19 ಮಾರ್ಗಸೂಚಿ ಅನ್ವಯ ಚಿತ್ರಮಂದಿರ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳು ಕಾರ್ಯನಿರ್ವಹಿಸಲು ಶೇ.50ರಷ್ಟು ಅನುಮತಿ ನೀಡಲಾಗಿದೆ.