Advertisement

ಕೋವಿಡ್-19 ಸೈನಿಕರಿಗೆ ವಿಮಾ ಸೌಲಭ್ಯಕ್ಕೆ ಯತ್ನ

04:30 PM Apr 14, 2020 | mahesh |

ಚಿಕ್ಕೋಡಿ: ಕೊರೊನಾ ವೈರಸ್‌ ವಿರುದ್ಧ ಹೋರಾಟ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಕೇಂದ್ರ ಸರಕಾರದಿಂದಲೂ ಸೌಲಭ್ಯ ಕಲ್ಪಿಸುವ
ನಿಟ್ಟಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಕಳುಹಿಸಲಾಗಿದೆ. ಲಾಕ್‌ ಡೌನ್‌ ಅವಧಿ ಮುಗಿದ ನಂತರ ಪ್ರತ್ಯಕ್ಷವಾಗಿ ಅವರಿಗೆ ಭೇಟಿಯಾಗಿ ಬರಲಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಿಪ್ಪಾಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪಾಂಗೀರಿ ಬಿ, ಶಿರಗುಪ್ಪಿ ಹಾಗೂ ಬುದಕಮುಖ ಗ್ರಾಮದಲ್ಲಿ ಕೊರೊನಾ ವೈರಸ್‌ ಕುರಿತು ಹಮ್ಮಿಕೊಂಡ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ವಿಮಾ ಸೌಲಭ್ಯ ನೀಡಿದೆ. ಹಾಗೆಯೇ ಅಂಗನವಾಡಿ ಕಾರ್ಯಕರ್ತರಿಗೂ ವಿಸ್ತರಣೆ ಮಾಡಬೇಕು ಎಂದರು.

ರಾಜ್ಯದ 30 ಜಿಲ್ಲೆಗಳಿಂದ ಕಳೆದ ವಾರ ವರದಿ ಪಡೆದಿದ್ದೇನೆ. ಎರಡು ದಿನಗಳ ಹಿಂದೆ ಕ್ಯಾಬಿನೆಟ್‌ ಸಭೆಯಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗಾಗಿ ಏನಾದರೂ ಮಾಡೋಣವೆಂದು ಮನವಿ ಮಾಡಿದ್ದೇನೆ. ಅದಕ್ಕೆ ಸ್ಪಂದಿಸಿದ ಸಿಎಂ, ಸದ್ಯದ ಪರಿಸ್ಥಿತಿ ಹತೋಟಿಗೆ ಬಂದ ನಂತರ ಮಾಡೋಣವೆಂದು ಭರವಸೆ ನೀಡಿದ್ದಾರೆ ಎಂದರು.

ತಹಶೀಲ್ದಾರ್‌ ಪ್ರಕಾಶ ಗಾಯಕವಾಡ, ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ತಾಲೂಕು ವೈದ್ಯಾಧಿ ಕಾರಿ ಡಾ| ವಿ.ವಿ. ಶಿಂಧೆ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಸ್ಥಳೀಯ ಪಿಎಸ್‌ಐ ಕುಮಾರ ಹಾಡಕರ, ನೀರಾವರಿ ಇಲಾಖೆಯ ಎಇಇ ಜಿ.ಡಿ.  ಮಂಕಾಳೆ, ಸಿದ್ದು ನರಾಟೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ತಾಪಂ ಸದಸ್ಯ ಪಂಕಜ ದೇಸಾಯಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next