ನವ ದೆಹಲಿ : ಕೋವಿಡ್ 19 ಲಸಿಕಾ ಪ್ರಯೋಗಗಳ ಭಾಗವಾಗಿ, ಭಾರತ್ ಬಯೋಟೆಕ್ ಸಂಸ್ಥೆ ಮುಂದಿನ ವಾರ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೆ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಎರಡನೇ ಡೋಸ್ ನ ಪ್ರಯೋಗ ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿ ಮಾಡಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಗೆ ಬರಬೇಕೆಂದು ಇಷ್ಟ ಇರೋರು ಬಹಳಷ್ಟು ಜನ ಇದ್ದಾರೆ, ಆದ್ರೆ ಹೆಸರೇಳಲ್ಲ : ಡಿಕೆಶಿ
ದೆಹಲಿಯ ಏಮ್ಸ್ ಲಸಿಕಾ ಪ್ರಯೋಗ ಕೇಂದ್ರದಲ್ಲಿ ಈಗಾಗಲೇ 18 ವರ್ಷದ ಒಳಗಿನವರಿಗೆ ಲಸಿಕೆ ಪ್ರಯೋಗವನ್ನು ಮಾಡಲಾಗಿದೆ. ಈ ಪ್ರಯೋಗಾತ್ಮಕ ಪರೀಕ್ಷೆಯ ಎಲ್ಲಾ ಫಲಿತಾಂಶವು ಎಲ್ಲಾ ವರ್ಷದ ಗುಂಪಿನ ಪ್ರಯೋಗಳು ಮುಗಿದು ಒಂದು ತಿಂಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಲಸಿಕಾ ಪ್ರಯೋಗಾತ್ಮಕ ಪರೀಕ್ಷೆಗೆ 12 ರಿಂದ 18, 6 ರಿಂದ 12 ಹಾಗೂ 2 ರಿಂದ 6 ವರ್ಷಗಳ ಮೂರು ಗುಂಪುಗಳನ್ನಾಗಿ ಮಾಡಲಾಗಿದ್ದು, ಸದ್ಯ 2 ರಿಂದ 6 ವರ್ಷದ ಮಕ್ಕಳಿಗೆ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಯೋಗಕ್ಕೆ ಮುಂದಾಗಿದೆ.
ಇನ್ನು, ಇತ್ತೀಚೆಗೆ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯ ಪ್ರಯೋಗವನ್ನು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ದೆಹಲಿ ಹೈ ಕೋರ್ಟ್ ಗೆ ಕೇಂದ್ರ ಹೇಳಿದೆ.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 35,342 ಕೋವಿಡ್ ಪ್ರಕರಣ ಪತ್ತೆ, 483 ಮಂದಿ ಸಾವು