Advertisement
ನಮ್ಮ ದಾಸ್ತಾನುಗಳಲ್ಲಿ ಸಾಕಷ್ಟು ಆಹಾರ ಧಾನ್ಯಗಳಿವೆ. ಹೀಗಾಗಿ ಬಡವರಿಗೆ ಒಂದೇ ಬಾರಿಗೆ 6 ತಿಂಗಳ ಕೋಟಾವನ್ನು ಪೂರೈಸಿ ಎಂದು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದೇವೆ. ಮುಂದೆ ಪರಿಸ್ಥಿತಿ ಬಿಗಡಾಯಿಸಿದರೆ, ದೇಶದ ಬಡ ಜನ ಆಹಾರವಿಲ್ಲದೆ ಪರಿತಪಿಸಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಹರಡುವಿಕೆಯಿಂದ ಹೆದರಿದ ಮಹಾರಾಷ್ಟ್ರದ ಯವತ್ಮಾಲ್ ಪಟ್ಟಣದ ಸರಕಾರಿ ಆಸ್ಪತ್ರೆಯ ಬಟ್ಟೆ ಒಗೆಯುವ ಸಿಬಂದಿ, ರೋಗಿಗಳ ಬಟ್ಟೆ ತೊಳೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದೇ ಆಸ್ಪತ್ರೆಯಲ್ಲಿ ಮೂರು ಕೊರೊನಾ ಸೋಂಕಿತರು ಮತ್ತು ನಾಲ್ವರು ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಸಿಬಂದಿ ಪ್ರತ್ಯೇಕ ನಿಗಾ ಘಟಕದ ಹೊದಿಕೆಗಳು, ಪರದೆಗಳನ್ನು ಧೋಬಿಗಳಿಗೆ ತೊಳೆಯಲು ನೀಡಿದಾಗ ಅವರು ಅವುಗಳನ್ನು ಮುಟ್ಟಲು ನಿರಾಕರಿಸಿದ್ದಾರೆ. ಬಟ್ಟೆಗಳನ್ನು ಮುಟ್ಟಿದರೆ ನಮಗೂ ವೈರಸ್ ತಗಲಬಹುದು. ನಾವು ಆ ಬಟ್ಟೆಗಳನ್ನು ಮುಟ್ಟುವುದಿಲ್ಲ ಎಂದಿದ್ದಾರೆ.