ಉಳ್ಳಾಲ: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ 21 ದಿನಗಳ ಲಾಕ್ ಡೌನ್ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೂರು ದಿನಗಳ ಸಂಪೂರ್ಣ ಕರ್ಪ್ಯೂ ಬಳಿಕ ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಖರೀದಿಸಲು ಮುಗಿಬಿದ್ದರು.
ಉಳ್ಳಾಲ, ತೊಕ್ಕೊಟ್ಟು ಜಂಕ್ಷನ್,ಒಳಪೇಟೆ , ಕುತ್ತಾರು, ದೇರಳಕಟ್ಟೆ ಸೇರಿದಂತೆ ಪ್ರಮುಖ ಜಂಕ್ಷನ್ ಗಳಲ್ಲಿ ಜನರು ಸರತಿಯಲ್ಲಿ ನಿಂತು ಖರೀದಿ ನಡೆಸಿದರು.
ಸಾಮಾಜಿಕ ಅಂತರ ಇಲ್ಲ: ಹೆಚ್ಚಿನ ಜಂಕ್ಷನ್ ಗಳಲ್ಲಿ ಜನರು ಸಾಮಾಜಿಕ ಅಂತರ ಕಾಪಾಡದೆ ಖರೀದಿ ನಡೆಸಿದರು. ಮುಖ್ಯವಾಗಿ ತರಕಾರಿ, ಜಿನಸು, ಮೀನು, ಹಣ್ಣು ಹಂಪಲು ಜನರು ಮುಗಿಬಿದ್ದರು.
ದುಪ್ಪಟ್ಟು ದರ: ತರಕಾರಿ ಸೇರಿದಂತೆ ಹಣ್ಣು ಹಂಪಲು ಮತ್ತು ಅಗತ್ಯ ವಸ್ತುಗಳಿಗೆ ಜನರು ದುಪ್ಪಟ್ಟು ದರ ನೀಡಿ ಖರೀದಿಸುವಂತಾಗಿದೆ.
ಸಚಿತ್ರ – ವಿಡಿಯೋ ವರದಿ: ವಸಂತ ಕೊಣಾಜೆ