Advertisement

ಬಿರು ಬಿಸಿಲಿಗೂ ಬಗ್ಗಲ್ಲ ಕೊರೊನಾ

11:53 PM Mar 20, 2020 | Hari Prasad |

ಹೊಸದಿಲ್ಲಿ: ಹೇಗೂ ಬೇಸಗೆ ಆರಂಭವಾಗಿದೆ. ಈ ಬಿರುಬಿಸಿಲ ಹೊಡೆತಕ್ಕೆ ಕೊರೊನಾ ವೈರಸ್‌ ಮೆತ್ತಗಾಗಿಹೋಗುತ್ತದೆ ಎಂದು ಯಾರಾದರೂ ಹೇಳಿದ್ದರೆ, ಅದನ್ನು ನೀವು ನಂಬಿದ್ದರೆ ಕೂಡಲೇ ಆ ಅಪನಂಬಿಕೆಯಿಂದ ಹೊರಬನ್ನಿ ಏಕೆಂದರೆ, ಎಂಥಾ ಬಿಸಿಲೇ ಬಂದರೂ ಕೊರೊನಾ ವೈರಸ್‌ನ ಶಕ್ತಿ ಕುಗ್ಗುವುದಿಲ್ಲ.

Advertisement

ಬೇರೆ ವೈರಸ್‌ಗಳು ಋತು ಬದಲಾದಂತೆ, ಅದರಲ್ಲೂ ಬೇಸಿಗೆ ಬಂದರೆ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಆದರೆ ಕೋವಿಡ್‌-19 ಹಾಗಲ್ಲ. ಎಷ್ಟೇ ಬಿಸಿಲಿದ್ದರೂ ಹರಡು ತ್ತಲೇ ಇರುತ್ತದೆ ಎಂದು ಚೀನದ ಕೆಲ ತಜ್ಞರು ಸ್ಪಷ್ಟಪಡಿಸಿದ್ದಾರೆ. ಚೀನದಲ್ಲಿ ಬಿಸಿಲು ಹೆಚ್ಚಾಗಿದ್ದ ಸಮಯದಲ್ಲಿ ವೈರಾಣು ಹರಡುವಿಕೆ ನಿಯಂತ್ರಣಕ್ಕೆ ಬಂದಿರಲಿಲ್ಲ.

ಆದರೆ ಸರಾಸರಿ ತಾಪಮಾನ 8.72 ಡಿಗ್ರಿ ಸೆಲ್ಸಿಯಸ್‌ ಮೀರಿದಾಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಹೇಳಿದೆ.

ಶೀತ, ನೆಗಡಿ ಹಾಗೂ ಸಾಮಾನ್ಯ ಜ್ವರಕ್ಕೆ ಕಾರಣವಾಗುವ ವೈರಸ್‌ಗಳ ಸಾಮರ್ಥ್ಯ ಬೇಸಿಗೆ ಆರಂಭವಾಗುತ್ತಿದ್ದಂತೆ ಕಡಿಮೆ ಆಗುತ್ತದೆ. ಆದರೆ ಕೊರೊನಾ ವೈರಸ್‌ ಹಾಗಲ್ಲ. ತಾಪಮಾನ ಹೆಚ್ಚಾದಾಗ ಇದರ ಪ್ರಭಾವ ಕೂಡ ಹೆಚ್ಚಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next