Advertisement

ರ‍್ಯಾಂಡಮ್ ಟೆಸ್ಟ್: ಪಡುಬಿದ್ರಿ ಹೋಟೆಲ್ ಮತ್ತು ವ್ಯವಹಾರ ಮಳಿಗೆ ಸಿಬ್ಬಂದಿಗೆ ಸೋಂಕು ದೃಢ

08:40 PM Jul 16, 2020 | keerthan |

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆಗಳು, ಹೋಟೆಲ್ ಸಿಬ್ಬಂದಿಗಳ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಈ ವೇಳೆ ಪಡುಬಿದ್ರಿಯ ಒಂದು ಹೋಟೆಲ್ ನ ಇಬ್ಬರು ಸಿಬ್ಬಂದಿ ಮತ್ತು ವ್ಯವಹಾರ ಮಳಿಗೆಯ ಓರ್ವನಿಗೆ ಕೋವಿಡ್ ಸೋಂಕು ತಾಗಿರುವುದು ಬೆಳಕಿಗೆ ಬಂದಿದೆ.

Advertisement

ಇಬ್ಬರು ಸಿಬ್ಬಂದಿಗೆ ಬುಧವಾರ ಕೋವಿಡ್ ಸೋಂಕು ದೃಢವಾಗಿದ್ದರೂ ಮಾಲಕರು ಹೋಟೆಲ್ ಬಂದ್ ಮಾಡದೆ ಇಂದು ಕೂಡಾ ತೆರೆದಿದ್ದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಅನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿನ ವ್ಯವಹಾರ ಮಳಿಗೆಯೊಂದರ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ವ್ಯವಹಾರ ಮಳಿಗೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು

Advertisement

Udayavani is now on Telegram. Click here to join our channel and stay updated with the latest news.

Next